alex Certify ಒಂದು ವರ್ಷದಲ್ಲಿ ಈತ ಇಳಿಸಿದ್ದಾನೆ ಬರೋಬ್ಬರಿ 45 ಕೆಜಿ ತೂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ವರ್ಷದಲ್ಲಿ ಈತ ಇಳಿಸಿದ್ದಾನೆ ಬರೋಬ್ಬರಿ 45 ಕೆಜಿ ತೂಕ

ನೆಚ್ಚಿನ ನಟ ಅಥವಾ ನಟಿ ಅಭಿನಯದ ಚಿತ್ರ ಬಿಡುಗಡೆಯಾದರೆ ಮೊದಲ ದಿನದ ಮೊದಲ ಪ್ರದರ್ಶನದಲ್ಲೇ ಸಿನಿಮಾ ನೋಡಿಬಿಡಬೇಕು ಎನ್ನುವ ಹುಚ್ಚು ಅಭಿಮಾನಿಗಳಿದ್ದಾರೆ‌.

ಅದಕ್ಕಾಗಿ ಏನು ಬೇಕಿದ್ದರೂ ಮಾಡುತ್ತಾರೆ. ಬ್ಲಾಕ್ ಅಲ್ಲಿ ದುಬಾರಿ ದುಡ್ಡು ಕೊಟ್ಟದಾರೂ ಸರಿ ಚಿತ್ರಮಂದಿರದಲ್ಲೊಂದು ಸೀಟು ಗಿಟ್ಟಿಸಿಯೇಬಿಡುತ್ತಾರೆ.

ಆದರೆ, ಇಲ್ಲೊಬ್ಬನಿದ್ದಾನೆ. ಹೆಸರು ಜಾರೆಡ್ ರೀಮ್. ರೋಲರ್ ಕೋಸ್ಟರ್ ನಲ್ಲಿ ಜಾಲಿರೈಡ್ ಗೆ ಸದಾ ಹಾತೊರೆಯುವ ಈತ, ಇದಕ್ಕಾಗಿ 45 ಕೆ‌ಜಿ ತೂಕವನ್ನೇ ಇಳಿಸಿಕೊಂಡಿದ್ದಾನೆ‌‌.

ಅಮೆರಿಕಾದ ಓಹಿಯೋದಲ್ಲಿನ ಈತ ಯಾವುದೇ ಅಮ್ಯುಸ್ಮೆಂಟ್ ಪಾರ್ಕ್ ಗೆ ಹೋದರೂ ರೋಲರ್ ಕೋಸ್ಟರ್ ಏರದೆ ಬಂದದ್ದೇ ಇಲ್ಲ. ಆರಂಭದಲ್ಲಿ ಸಾಧಾರಣ ಮೈಕಟ್ಟು ಹೊಂದಿದ್ದ ಈತ ದಿನೇ ದಿನೇ ದಪ್ಪಗಾಗಿದ್ದಾನೆ.

ಒಮ್ಮೆ ಇಲ್ಲಿನ ಕಿಂಗ್ಸ್ ಐಲ್ಯಾಂಡ್ ಪಾರ್ಕ್ ಗೆ ರೋಲರ್ ಕೋಸ್ಟರ್ ಆಡುವುದಕ್ಕೆಂದೇ ಹೋದಾಗ ಅವನ ದಢೂತಿ ದೇಹ ನೋಡಿ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ. ಹಲವು ಬಾರಿ ಕಿಂಗ್ಸ್ ಐಲ್ಯಾಂಡ್ ಪಾರ್ಕ್ ಗೆ ಭೇಟಿ ನೀಡಿ ಬೇಡಿಕೊಂಡರೂ ಅವಕಾಶ ಸಿಗಲೇ ಇಲ್ಲ.

ಕೊನೆಗೆ ದೇಹ ತೂಕ ಇಳಿಸಲು ನಿಶ್ಚಯಿಸಿದ ಈತ, ತಿಂಗಳಿಗೆ ಕನಿಷ್ಠ 10 ಕೆಜಿ ಕರಗಿಸುವ ಗುರಿ ಇಟ್ಟುಕೊಂಡು ಕಸರತ್ತು ಆರಂಭಿಸಿದ. ಒಂದು ವರ್ಷದೊಳಗೆ ಬರೋಬ್ಬರಿ 45 ಕೆಜಿ ಕರಗಿದ್ದಾನೆ.

ಕೊರೋನಾ ಲಾಕ್ ಡೌನ್ ನಿಂದ ರೋಲರ್ ಕೋಸ್ಟರ್ ರೈಡ್ ಇರಲಿಲ್ಲ. ದೇಹದ ತೂಕ ಇಳಿಸಲು ಕಾಲಾವಕಾಶ ಸಿಕ್ಕಿತ್ತು. ಇದೀಗ ತೆಳ್ಳಗಾಗಿದ್ದೇನೆ. ರೋಲರ್ ಕೋಸ್ಟರ್ ರೈಡ್ ಮಾಡೇ ಮಾಡುತ್ತೇನೆ ಎಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...