alex Certify ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಂಕ್ರೀಟ್‌ಗಿಂತ ಗಟ್ಟಿಯಾದ ಇಟ್ಟಿಗೆ ಸಿದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಂಕ್ರೀಟ್‌ಗಿಂತ ಗಟ್ಟಿಯಾದ ಇಟ್ಟಿಗೆ ಸಿದ್ದ

ವ್ಯಾಪಕವಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾದ ಕೆನ್ಯಾದ ಝಾಂಬಿ ಮಟೀ ಅನುಕರಣೀಯ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಈಕೆ ಕೊಡುತ್ತಿರುವ ಮರುರೂಪವನ್ನು ಜಗತ್ತಿನ ಅಗ್ರ ಕಾರ್ಖಾನೆಗಳೂ ಸಹ ಕೊಡಲಾರವು.

ನೈರೋಬಿಯಲ್ಲಿರುವ ಈಕೆಯ ಪುಟ್ಟ ಘಟಕವೊಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಇಟ್ಟಿಗೆ ಮಾಡಲಾಗುತ್ತಿದ್ದು, ಇವುಗಳು ಕಾಂಕ್ರೀಟ್‌ಗಿಂತಲೂ ಗಟ್ಟಿಯಾಗಿವೆ. ’ಜೆಂಗೇ ಮೇಕರ್ಸ್’ ಹೆಸರಿನ ಕಾರ್ಖಾನೆಯನ್ನು ಸ್ಥಾಪಿಸಿರುವ ಮಟೀ, ಪ್ಲಾಸ್ಟಿಕ್ ತ್ಯಾಜ್ಯದಿಂದ ಉಪಯುಕ್ತ ನಿರ್ಮಾಣ ಸಾಮಗ್ರಿಗಳನ್ನು ತಯಾರಿಸುತ್ತಿದ್ದಾರೆ.

“ನಮ್ಮ ಉತ್ಪನ್ನಗಳು ಕಾಂಕ್ರೀಟ್‌ 5-7 ಪಟ್ಟು ಗಟ್ಟಿಯಾಗಿರುತ್ತವೆ. ಸಂಸ್ಕರಿಸಲಾದ ಕಾರಣದಿಂದ ಮರುಬಳಕೆ ಮಾಡಲಾಗದ ತ್ಯಾಜ್ಯವನ್ನೇ ನಾವು ಆಯ್ದುಕೊಳ್ಳುತ್ತಿರುವುದು” ಎನ್ನುತ್ತಾರೆ ಮಟೀ.

ಬಾಲಕನ ಜೊತೆ ಶ್ವಾನದ ಸೈಕಲ್ ಸವಾರಿ….. ಎಷ್ಟು ಮುದ್ದಾಗಿದೆ ಗೊತ್ತಾ ಈ ವೈರಲ್​ ವಿಡಿಯೋ…!

ಪ್ಯಾಕೇಜಿಂಗ್ ಕಾರ್ಖಾನೆಗಳಿಂದ ತ್ಯಾಜ್ಯವನ್ನು ಉಚಿತವಾಗಿ ಪಡೆಯುವ ಮಟೀ ಅವರ ಫ್ಯಾಕ್ಟರಿ, ಚಿಂದಿ ಆಯುತ್ತಾ ಪ್ಲಾಸ್ಟಿಕ್ ತ್ಯಾಜ್ಯ ತಂದು ಕೊಡುವ ಮಂದಿಗೆ ಹಣವನ್ನೂ ಕೊಡುತ್ತಾರೆ.

ಸದ್ಯದ ಮಟ್ಟಿಗೆ ಈ ಕಾರ್ಖಾನೆಯು ನಾಲ್ಕಾರು ರೀತಿಯ ಪ್ಲಾಸ್ಟಿಕ್‌ಗಳನ್ನು ಬೆರೆಸಿ ಗಟ್ಟಿಮುಟ್ಟಾದ 1500 ಇಟ್ಟಿಗೆಗಳನ್ನು ಉತ್ಪಾದಿಸುತ್ತಿದೆ. ಹಾಲು ಹಾಗೂ ಶಾಂಪೂ ಬಾಟಲಿಗಳ ಗಟ್ಟಿ ಪ್ಲಾಸ್ಟಿಕ್ ಜೊತೆಗೆ ತೆಳುವಾದ ಪ್ಲಾಸ್ಟಿಕ್‌ಗಳ ಮಿಶ್ರಣದೊಂದಿಗೆ ಮರಳನ್ನು ಬೆರೆಸಿ, ಬಿಸಿ ಮಾಡಿ ನಿಖರವಾದ ಆಕೃತಿಯನ್ನು ಕೊಡಲಾಗುತ್ತದೆ.

2017ರಿಂದ ಇಲ್ಲಿಯವರೆಗೂ ಮಟೀ ಅವರ ಕಾರ್ಖಾನೆಯು 20 ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್‌ ಮರುಬಳಕೆ ಮಾಡಿದೆ. 2021ರ ವೇಳೆಗೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಮೂರು ಪಟ್ಟು ವರ್ಧಿಸಿಕೊಳ್ಳಲು ಮಟೀರ ಕಾರ್ಖಾನೆ ಸಿದ್ಧತೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...