alex Certify ಮದುವೆ ಫೋಟೋದಲ್ಲಿ ವರ ಯಾರೆಂಬುದೇ ಗೊಂದಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಫೋಟೋದಲ್ಲಿ ವರ ಯಾರೆಂಬುದೇ ಗೊಂದಲ…!

ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡುತ್ತಿರುವ ಮದುವೆಯ ಫೋಟೋವೊಂದನ್ನು ನೋಡಿದ ಕೆಲವರು ವಧು ಮದುವೆಯಾಗಿದ್ದು ಯಾರೊಂದಿಗೆ..? ಎಂದು ಅನುಮಾನ‌ ವ್ಯಕ್ತಪಡಿಸಿದ್ದಾರೆ.

ಹೌದು, ಮದುವೆಯ ಫೋಟೋವೊಂದರಲ್ಲಿ ವಧು, ವರ ಇದ್ದಾರೆ‌. ಪಾದ್ರಿ ಮದುವೆಯ ಪುಸ್ತಕ ಹಿಡಿದು ಶಾಸ್ತ್ರ ಮಾಡಿಸುತ್ತಿದ್ದಾರೆ. ಆದರೆ, ಅಲ್ಲಿ ಹೀಗೆಲ್ಲ ಜೋಕ್‌ಗೆ ಕಾರಣವಾಗಿದ್ದಾದರೂ ಏನು?

ಸುಂದರ ಗೋಲ್ಡನ್ ರಿಟ್ರೀವರ್ ನಾಯಿಯೊಂದು ಟೈ ಬಿಗಿದು ವಧುವಿನ ಕೈಗೆ ತನ್ನ ಕಾಲು ಕೊಟ್ಟು ಆಕೆಯನ್ನೇ ಪ್ರೀತಿಯಿಂದ ನೋಡುತ್ತ ನಿಂತಿದೆ.

“ನಾನು ಆಕೆಯನ್ನು ಬಂಗಾರಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಲು ಯತ್ನಿಸುತ್ತೇನೆ” ಎಂಬ ಅಡಿಬರಹದೊಂದಿಗೆ ಫೋಟೋವನ್ನು ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಆ ಫೋಟೋ ನೋಡಿ ವ್ಯಕ್ತಿಯೊಬ್ಬ ” ಕ್ಷಮಿಸು ಗೆಳೆಯ(ವರ) ಮದುವೆಗೆ ನೀನೇ ಸಾಕ್ಷಿದಾರ” ಎಂದು ಛೇಡಿಸಿದ್ದಾರೆ. ಇನ್ನೂ ಹಲವರು ಜೋಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...