ಲಾಕ್ ಡೌನ್ ಸಂದರ್ಭದಲ್ಲಿ ತಾವು ಮಾಡುವ ವಿಶೇಷ ಚಟುವಟಿಕೆಯನ್ನು ತಮ್ಮ ಆತ್ಮೀಯ ಬಳಗಕ್ಕೆ ತಿಳಿಸಲು ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಇದೇ ವೇಳೆ ಯುವತಿಯೊಬ್ಬರು ವರ್ಕೌಟ್ ಮಾಡುವ ಸಂದರ್ಭದಲ್ಲಿ ಮನೆಯ ಬೆಕ್ಕು ಪದೇ ಪದೆ ಮೊಬೈಲ್ ಕ್ಯಾಮರಾಗೆ ಹಣಕಿ ನೋಡುವ ವಿಡಿಯೋ ವೈರಲ್ ಆಗಿದೆ.
ರನ್ ಫಾಕ್ಸ್ ಕ್ಸಿರಮ್ ಎಂಬ ಟಿಕ್ ಟಾಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ನೂರಾರು ಪ್ರತಿಕ್ರಿಯೆಗಳು ಬಂದಿವೆ. ಮುದ್ದಾದ ಬೆಕ್ಕು ಕುತೂಹಲದಿಂದ ಪದೇ ಪದೆ ಕ್ಯಾಮರಾಗೆ ಮುಖ ಒಡ್ಡುವುದು ಗಮನ ಸೆಳೆಯುವಂತಿದೆ. ಯುವತಿಯ ವರ್ಕೌಟ್ ಬೆಕ್ಕಿನ ಕಾರಣಕ್ಕೆ ವೈರಲ್ ಆದಂತಾಗಿದೆ.