alex Certify ನಿಮ್ಮನ್ನು ಗೊಂದಲಕ್ಕೆ ಕೆಡುವುತ್ತೆ ಈ ಪ್ರಾಣಿಯ ಚಹರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗೊಂದಲಕ್ಕೆ ಕೆಡುವುತ್ತೆ ಈ ಪ್ರಾಣಿಯ ಚಹರೆ…!

ನ್ಯೂಯಾರ್ಕ್: ಮೆಗಲಿಕಾ ಜಾತಿಯ ಹಂದಿಗಳನ್ನು ನೋಡಿದರೆ, ಅದು ನಾಯಿಯೋ ಅಥವಾ ಕುರಿಯೋ ಎಂದು ಗೊಂದಲವಾಗುವಂತಿರುತ್ತವೆ.

ಏಕೆಂದರೆ ಅದು ಕುರಿಯಂತೆ ಕಾಣುತ್ತದೆ. ನಾಯಿಯಂತೆ ವರ್ತಿಸುತ್ತದೆ. ಇತರ ಜಾತಿಯ ಹಂದಿಗಳಿಗಿಂತ ಹೆಚ್ಚು ಅಂದರೆ ನಾಯಿ, ಕುರಿಗಳಂತೆ ಕೂದಲು ಹೊಂದಿರುತ್ತವೆ. ಇದರಿಂದ ಅದನ್ನು ಕುರಿ ಹಂದಿ ಎಂದೂ ಕರೆಯುವುದುಂಟು.‌

ಅಮೆರಿಕದ ಪೀಸ್ ರಿಡ್ಜ್ ಸೆಂಚುರಿಯಲ್ಲಿರುವ ಮೆಗಲಿಕಾ ಹಂದಿಯೊಂದು ತನ್ನ ಅಪರೂಪದ ಚಹರೆಯಿಂದಲೇ ಸಾಕಷ್ಟು ಪ್ರಸಿದ್ಧವಾಗಿದೆ.

ಅಂಗೂಸ್ ಎಂಬ ಹೆಸರಿನ ಈ ಹಂದಿಯನ್ನು 2018 ರ ಪ್ರಾಣಿ ಕಲ್ಯಾಣ ಕಾರ್ಯಕ್ರಮದಡಿ ಕರೆತರಲಾಯಿತು. ಆಗ ಅದು ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿತ್ತು.‌ ಅದರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಈಗ ಸೆಂಚುರಿಯಲ್ಲಿ ಹಂದಿಗೆ ಪ್ರತ್ಯೇಕ ಮನೆ ದೊರಕಿದ್ದು, ಸಾಕಷ್ಟು ತಿಂದುಂಡು ಆರೋಗ್ಯಕರವಾಗಿದೆ. ಅದರ ವಿಡಿಯೋವನ್ನು ಫೀಸ್ ರಿಡ್ಜ್ ಸೆಂಚುರಿ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಬಿಡುಗಡೆ ಮಾಡಿದೆ.

ಒಂದಿಷ್ಟು ಆಹಾರ ತಿಂದ ನಂತರ ಇನ್ನೂ ಬೇಕು ಎಂದು ಕಟ್ಟೆಯ ಮೇಲೆ ಕಾಲಿಟ್ಟು ಕೇಳುವ ವಿಡಿಯೋ ಅದಾಗಿದೆ. ಅದನ್ನು ಪೋಷಿಸುವ ಮಹಿಳೆ ನೀನಾಗಲೇ ಸಾಕಷ್ಟು ತಿಂದಿದ್ದೀಯಾ ಎನ್ನುವ ಮಾತುಗಳು ವಿಡಿಯೋದಲ್ಲಿ ಕೇಳಿಸುತ್ತವೆ.

“ಫಾರ್ಮ್ ನಿಂದ ಬರುವಾಗ ಅಂಗೂಸ್ ಸಂಪೂರ್ಣ ನಿತ್ರಾಣವಾಗಿತ್ತು. 2018 ರ ಪ್ರಾಣಿ ರಕ್ಷಾ ಕಾರ್ಯಕ್ರಮ ಬರುವವರೆಗೂ ರೈತರು ಹಲವು ಪ್ರಾಣಿಗಳನ್ನು ಹೂಳಿದ್ದರು. ಅಂಗೂಸ್ ದು ಗಟ್ಟಿ ಜೀವ, ಉಳಿದುಕೊಂಡಿತ್ತು.‌ ಸೆಂಚುರಿಗೆ ಬಂದ ನಂತರ ಆತನನ್ನು ಬೇರೆಯಾಗಿಟ್ಟು ಪೋಷಿಸಲಾಯಿತು” ಎಂದು ಸೆಂಚುರಿ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಳ್ಳಲಾಗಿದೆ.

Angus came from a farm where conditions were so bad that the farmer executed and buried all the animals before animal welfare arrived so that he could hide how skinny and neglected they were. Angus was the sole survivor. He has to be kept separate when he eats now because after being starved for so long, he will go into survival mode and steal everyone else’s food before they finish. He has learned how to use his cuteness to try to get let out early. It’s pretty hard to say “no” to that sweet face!!

Posted by Peace Ridge Sanctuary on Monday, July 2, 2018

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...