alex Certify ನೀವು ಬಳಕೆ ಮಾಡುವ ಮಾಸ್ಕ್​ ಎಷ್ಟು ಸೇಫ್​ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಬಳಕೆ ಮಾಡುವ ಮಾಸ್ಕ್​ ಎಷ್ಟು ಸೇಫ್​ ಗೊತ್ತಾ….?

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಮಾಸ್ಕ್​ ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಬೆರತು ಹೋಗಿದೆ. ಕೊರೊನಾ ವಿರುದ್ಧ ನೀವು ಮಾಸ್ಕ್​ ಬಳಕೆ ಮಾಡಬೇಕಾದ್ದರಿಂದ ಮಾಸ್ಕ್​ ಆಯ್ಕೆ ವೇಳೆ ತುಸು ಹೆಚ್ಚೇ ಜಾಗೂರಕರಾಗಿ ಇರೋದು ಒಳ್ಳೇದು.

ಅಮೆರಿಕದ ಸಂಶೋಧನಾ ತಂಡವೊಂದು ಸಾರ್ವಜನಿಕರು ಹಾಗೂ ವೃತ್ತಿಪರರು ಧರಿಸುವ ಮಾಸ್ಕ್​​ಗಳನ್ನ ಪರಿಶೀಲನೆ ಮಾಡಿದೆ. ನೈಲಾನ್​ ಮಾಸ್ಕ್​​ಗಳು ವೈರಸ್​ನ್ನ 79 ಪ್ರತಿಶತದವರೆಗೆ ತಡೆಯಬಲ್ಲುದು ಎಂಬ ಅಂಶ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಅಮೆರಿಕ ಪರಿಸರ ರಕ್ಷಣೆ ವಿಭಾಗದ ಸಹಭಾಗಿತ್ವದಲ್ಲಿ ನಾರ್ಥ್​ ಕೆರೊಲಿನಾ ಸ್ಕೂಲ್​ ಆಫ್​ ಮೆಡಿಸಿನ್​​ನ ವಿಜ್ಞಾನಿಗಳು ಸರ್ಜಿಕಲ್​ ಮಾಸ್ಕ್​, ಬಟ್ಟೆಯ ಮಾಸ್ಕ್​ ಸೇರಿದಂತೆ 12 ವಿಧದ ಮಾಸ್ಕ್​​ಗಳನ್ನ ಅಧ್ಯಯನ ಮಾಡಿದ್ದಾರೆ.

ಜಮಾ ಇಂಟರ್ನಲ್​ ಮೆಡಿಸಿನ್​​ನಲ್ಲಿ ಜರ್ನಲ್​​ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ ಮಾಸ್ಕ್​ನ ಆಕೃತಿ ಕೂಡ ಅದರ ಪರಿಣಾಮಕಾರತ್ವವನ್ನ ನಿರ್ಧರಿಸಬಲ್ಲದು. ಸರ್ಜಿಕಲ್​ ಮಾಸ್ಕ್​​ ವೈರಾಣುಗಳ ವಿರುದ್ಧ 38.9 ಶೇಕಡಾ ಪರಿಣಾಮಕಾರಿಯಾಗಿದೆ. ಆದರೆ ಈ ಮಾಸ್ಕ್​​ಗೆ ಸರಿಯಾದ ಕಿವಿ ಹಿಡಿಕೆ ಹಾಗೂ ಮೂಗಿನ ಭಾಗದಲ್ಲಿ ಹಿಡಿಕೆಯನ್ನ ಅಳವಡಿಸಿದ್ರೆ ಈ ಮಾಸ್ಕ್​ 60.3 ಶೇಕಡಾ ಪರಿಣಾಮಕಾರಿಯಾಗಲಿದೆ. ಇದೇ ಮಾಸ್ಕ್​​ಗೆ ನೈಲಾನ್​ ಪರದೆಯನ್ನ ಸೇರಿಸಿದ್ರೆ 80 ಪ್ರತಿಶತ ಪರಿಣಾಮಕಾರಿಯಾಗಲಿದೆ.

2 ನೈಲಾನ್​ ಪದರಗಳನ್ನುಳ್ಳ ನೈಲಾನ್​ ಮಾಸ್ಕ್​ಗಳು ಶೇಕಡಾ 79ರಷ್ಟು ಪರಿಣಾಮಕಾರಿ, ಹತ್ತಿ ಬಟ್ಟೆಯಿಂದ ಮಾಡುವ ಸಂಪೂರ್ಣ ಮುಖಕ್ಕೆ ಮುಚ್ಚುವ ಮಾಸ್ಕ್​ಗಳು ಶೇಕಡಾ 49ರಷ್ಟು ಪರಿಣಾಮಕಾರತ್ವವನ್ನ ತೋರಿಸಿವೆ. ಆದರೆ ಹತ್ತಿ ಬಟ್ಟೆಯಲ್ಲಿ ಸರ್ಜಿಕಲ್​ ಮಾದರಿಯ ಮಾಸ್ಕ್​ಗಳನ್ನ ಬಳಕೆ ಮಾಡುವವರು ನೀವಾಗಿದ್ದಾರೆ ಇದು ಕೇವಲ 26.5 ಶೇಕಡಾದಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...