alex Certify ಬೆತ್ತಲಾಗಿದ್ದರೂ ಅಳುಕದೆ ಹಾವಿನಿಂದ ಬೆಕ್ಕಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲಾಗಿದ್ದರೂ ಅಳುಕದೆ ಹಾವಿನಿಂದ ಬೆಕ್ಕಿನ ರಕ್ಷಣೆ

ಆಸ್ಟ್ರೇಲಿಯಾ: ಎರಡೂವರೆ ಮೀಟರ್ ಉದ್ದದ ಬೃಹತ್ ಹಾವಿನಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ನಂತರ ಪಶ್ಚಿಮ ಆಸ್ಟ್ರೇಲಿಯಾದ ವ್ಯಕ್ತಿ ಈಗ ಆ ದೇಶದಲ್ಲಿ ಹೀರೋ ಆಗಿದ್ದಾನೆ.

ನಿಕ್‌ ಕೇರನ್ಸ್ ಒಂದು ದಿನ ಬೆಳಗ್ಗೆ ಹಾಸಿಗೆಯಿಂದ ಏಳುವ ಮೊದಲೇ‌ ತನ್ನ ಪತ್ನಿ ಕಾರ್ಯನ್ ಕಿರುಚಾಟ ಕೇಳಿ ಎದ್ದು ಓಡಿದ್ದಾರೆ. ಮನೆಯ ಹಿಂದುಗಡೆ ಗಾರ್ಡನ್ ನಲ್ಲಿ ಮನೆಯ ಮುದ್ದಿನ ಬೆಕ್ಕಿನ ಮರಿಯನ್ನು ಹಾವು ಸುರುಳಿ ಸುತ್ತಿ ಹಿಡಿದಿರುವುದು ಕಂಡುಬಂದಿದೆ.

ಹಾವುಗಳಿಂದ‌ ಪ್ರಾಣಿಗಳನ್ನು ರಕ್ಷಿಸುವ ವಿಧಾನ ನಿಕ್ ಗೆ ಗೊತ್ತಿತ್ತು. ಆದರೆ, ಸಮಸ್ಯೆ ಎಂದರೆ ಹಾಸಿಗೆಯಿಂದ ಓಡಿ ಬರುವ ಗಾಬರಿಯಲ್ಲಿ ವಸ್ತ್ರ ಧರಿಸಿರಲಿಲ್ಲ.‌ ಆದರೂ ಅದೇ ಸ್ಥಿತಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಅವರ ಪತ್ನಿ ಕಾರ್ಯನ್ ಗೆ ಬೆಕ್ಕನ್ನು ಹಿಡಿದುಕೊಳ್ಳಲು ಹೇಳಿ ಹಾವನ್ನು ಎತ್ತಿದ್ದು, ಯಾವುದೇ ಗಾಯವಿಲ್ಲದೇ ಮಾರಣಾಂತಿಕ ಹಾವಿನ‌‌ ತೆಕ್ಕೆಯಿಂದ ಬೆಕ್ಕನ್ನು ರಕ್ಷಿಸಿದ್ದಾರೆ. ಆದರೆ ಹಾವು ನಿಕ್ ಅವರ ಬಲಗೈಯನ್ನು ಸುರುಳಿ ಸುತ್ತಿ ಹಿಡಿದಿದ್ದು, ಅದರಿಂದಲೂ ತಪ್ಪಿಸಿಕೊಂಡಿದ್ದಾರೆ.

“ನಾವು ಹಾವನ್ನೂ ಹೊಡೆದಿಲ್ಲ. ಆದರೆ, ಬೆಕ್ಕಿನ ಗಲ್ಲದ ಸಣ್ಣ ತುಂಡು ಕಿತ್ತು‌ ಬಂದಿದೆ. ಅದೀಗ ಚೇತರಿಸಿಕೊಳ್ಳುತ್ತಿದೆ” ಎಂದು ನಿಕ್‌ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...