alex Certify ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

Watch: Stunning Photos Capture Exact Moment Lightning Strikes Volcanic Ash Cloud in Japan

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ.

ಈ ವೇಳೆ ಬೂದಿ ಮೇಲೇಳುತ್ತಿದ್ದಂತೆಯೇ ಮಿಂಚೊಂದು ಸಿಡಿದಿದೆ. ಪ್ರಕೃತಿಯ ಈ ರೋಮಾಂಚಕಾರಿ ನೃತ್ಯದ ಅದ್ಭುತ ಛಾಯಾಚಿತ್ರಗಳು ಸಖತ್‌ ಸದ್ದು ಮಾಡುತ್ತಿವೆ. ಈ ದ್ವೀಪದಲ್ಲಿರುವ ಗ್ರಾಮಸ್ಥರು ತಮ್ಮ ಮುಂದೆ ನಡೆಯುತ್ತಿರುವ ದೃಶ್ಯಸಿರಿಯನ್ನು ಕಣ್ತುಂಬಿಕೊಂಡಿದ್ದಾರೆ.

ಈ ಜ್ವಾಲಾಪಾತದಿಂದ ಮೇಲೇಳುತ್ತಿದ್ದ ಹೊಗೆಯು ಮೂರು ಮೈಲಿಯಷ್ಟು ಎತ್ತರಕ್ಕೆ ಭುಗಿಲೆದ್ದಿದ್ದು, ದೂರದಿಂದ ನೋಡಬಹುದಾಗಿದೆ. ಜ್ವಾಲಾಪಾತದ ವೇಳೆ ಹೀಗೆ ಮಿಂಚು ಸಿಡಿಯುವುದು ಹೇಗೆ ಎಂಬ ಕುರಿತಂತೆ ಇನ್ನೂ ಹೆಚ್ಚಾಗಿ ತಿಳಿದುಬಂದಿಲ್ಲ.

ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪ್ರದೇಶಗಳಲ್ಲಿ ಒಂದಾಗಿರುವ ಸಕುರಾಜಿಮಾದಲ್ಲಿ ಘಟಿಸುವ ಈ ವಿಸ್ಮಯವನ್ನು ಸೆರೆ ಹಿಡಿಯಲು ರಾಯ್ಟರ್ಸ್ ಸಂಸ್ಥೆಯ ಛಾಯಾಗ್ರಾಹಕರೊಬ್ಬರು ಕಾತರದಿಂದ ಇದ್ದಿದ್ದಾಗಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...