alex Certify ಒಂದೇ ಒಂದು ಕಾಫಿಗಾಗಿ ಗ್ರಾಹಕ ಇಟ್ಟ ಡಿಮ್ಯಾಂಡ್​ ಕೇಳಿ ಸ್ಟಾರ್ ​ಬಕ್ಸ್ ಸಿಬ್ಬಂದಿಗೆ ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಒಂದು ಕಾಫಿಗಾಗಿ ಗ್ರಾಹಕ ಇಟ್ಟ ಡಿಮ್ಯಾಂಡ್​ ಕೇಳಿ ಸ್ಟಾರ್ ​ಬಕ್ಸ್ ಸಿಬ್ಬಂದಿಗೆ ಶಾಕ್​..!

ಅಮೆರಿಕದ ಖ್ಯಾತ ಕಾಫಿ ಮಳಿಗೆ ಸ್ಟಾರ್​ಬಕ್ಸ್​ ಭಾರತದಲ್ಲೂ ಕೂಡ ತನ್ನ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಬೇಡಿಕೆಯಂತೆಯೇ ಕಾಫಿಯನ್ನ ತಯಾರಿಸುವ ಈ ಶ್ರೀಮಂತ ಕಾಫಿ ಮಳಿಗೆ ಯುವಜನತೆಯ ಪಾಲಿಗೆ ಹಾಟ್​ ಫೇವರಿಟ್​ ಸ್ಥಳ.

ಇತ್ತೀಚಿಗೆ ಸ್ಟಾರ್​ಬಕ್ಸ್​ನ ಸಿಬ್ಬಂದಿಯೊಬ್ಬರು ಗ್ರಾಹಕರೊಬ್ಬರ ಅತೀ ವಿಚಿತ್ರ ಕಾಫಿ ಆರ್ಡರ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸ್ಟಾರ್​ಬಕ್ಸ್​ಗೆ ಬರುವ ಗ್ರಾಹಕರು ಸಾಮಾನ್ಯವಾಗಿ ಸರಳವಾದ ಬ್ಲಾಕ್​ ಫಿಲ್ಟರ್​ ಕಾಫಿಯನ್ನ ಆರ್ಡರ್​ ಮಾಡುತ್ತಾರೆ. ಇನ್ನು ಕೆಲವರು ಕ್ರೀಮ್​ ಇರುವ ಅಥವಾ ಶುಗರ್​ ಸಿರಪ್​ ಹಾಕಿದ ಕಾಫಿಗಳನ್ನ ಆರ್ಡರ್ ಮಾಡಬಹುದು. ಆದರೆ ಸ್ಟಾರ್​ ಬಕ್ಸ್ ಸಿಬ್ಬಂದಿ ಬ್ಯಾರಿಸ್ತಾ ಜೋಸಿ ಶೇರ್​ ಮಾಡಿದ ಫೋಟೋದಲ್ಲಿ ಗ್ರಾಹಕ 13 ಬಗೆಯ ಬೇಡಿಕೆಯನ್ನ ಇಟ್ಟಿದ್ದಾನೆ.

ಈ ಕಾಫಿ ಕಪ್​ನ ಫೋಟೋ ಶೇರ್​ ಮಾಡಿರುವ ಜೋಸಿ, ನಾನು ಯಾಕೆ ಕೆಲಸ ಬಿಡಬೇಕು ಅನ್ನೋದಕ್ಕೆ ಇದೂ ಒಂದು ಕಾರಣ ಎಂಬರ್ಥದಲ್ಲಿ ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...