alex Certify ನೆಟ್ಟಿಗರ ಹುಬ್ಬೇರಿಸಿದೆ ದೈತ್ಯ ಪತಂಗದ ಗಾತ್ರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹುಬ್ಬೇರಿಸಿದೆ ದೈತ್ಯ ಪತಂಗದ ಗಾತ್ರ…..!

ಪತಂಗಗಳು ಎಂದಾಕ್ಷಣ ನಿಮಗೆ ಅವು ಹಾರಾಡೋದು ಥಟ್​ ಅಂತಾ ನೆನಪಿಗೆ ಬರುತ್ತೆ. ಆದರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ದೊಡ್ಡ ಪತಂಗವೊಂದು ಪತ್ತೆಯಾಗಿದೆ.

ಇದು ಎಷ್ಟು ದೊಡ್ಡದಿದೆ ಅಂದರೆ ಅದರ ಭಾರದಿಂದ ಪತಂಗಕ್ಕೆ ಹಾರಾಡೋದೇ ಕಷ್ಟವಾಗಿದೆ. ಹೊಸ ಶಾಲಾ ಕಟ್ಟಡವನ್ನ ನಿರ್ಮಾಣ ಮಾಡುತ್ತಿದ್ದ ವೇಳೆ ಕಟ್ಟಡ ನಿರ್ಮಾಣಕಾರರು ಈ ಪತಂಗವನ್ನ ಗುರುತಿಸಿದ್ದಾರೆ. ಕ್ವೀನ್ಸ್​ಲ್ಯಾಂಡ್​​ನ ಮೌಂಟ್​​ ಕಾಟನ್​​ ರಾಜ್ಯ ಶಾಲೆಯಲ್ಲಿ ಈ ದೈತ್ಯ ಪತಂಗ ಪತ್ತೆಯಾಗಿದೆ. ಈ ಪತಂಗವು ಒಂದು ಹೆಗ್ಗಣದಷ್ಟು ಗಾತ್ರವನ್ನ ಹೊಂದಿದೆ ಎನ್ನಲಾಗಿದೆ.

ನಮ್ಮ ಶಾಲೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯದ ವೇಳೆಯಲ್ಲಿ ನಮಗೆ ಈ ದೈತ್ಯ ಪತಂಗ ಕಾಣಿಸಿಕೊಂಡಿದೆ. ಇಂತಹ ಪತಂಗವನ್ನ ನಾವು ಹಿಂದೆಂದೂ ಕಂಡಿರಲೇ ಇಲ್ಲ ಎಂದು ಶಾಲೆಯ ಪ್ರಾಂಶುಪಾಲೆ ಹೇಳಿದ್ದಾರೆ.

ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಮ್​ಗೆ ಕೊರೊನಾ ಸೋಂಕು ದೃಢ

ಶಾಲೆಯ ಆಡಳಿತ ಮಂಡಳಿಯು ಫೇಸ್​ಬುಕ್​ನಲ್ಲಿ ಈ ದೈತ್ಯ ಪತಂಗದ ಫೋಟೋವನ್ನ ಶೇರ್​ ಮಾಡಿದೆ. ಈ ಫೋಟೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಎಂಡೊಕ್ಸೈಲಾ ಸಿನೆರಸ್​ ಎಂಬ ಹೆಸರಿನ ದೈತ್ಯ ಪತಂಗವು ಹಾರಾಡೋದು ತುಂಬಾನೇ ಕಡಿಮೆ. ಹಾರಾಡಿದ್ದರೂ ಇವಕ್ಕೆ ಸಾಕಷ್ಟು ದೂರ ಕ್ರಮಿಸೋಕೆ ಸಾಧ್ಯವಾಗೋದಿಲ್ಲ. ಹೆಣ್ಣು ಪತಂಗಗಳು ಮರ ಹಾಗೂ ಬೇಲಿ ಬದಿಯಲ್ಲಿ ಕುಳಿತುಕೊಂಡು ಗಂಡು ಪತಂಗಗಳಿಗಾಗಿ ಹುಡುಕಾಟ ನಡೆಸುತ್ತವಂತೆ.

A giant wood moth found during the build! https://www.abc.net.au/radio/brisbane/programs/breakfast/giant-moth-invasion/13326950

Posted by Mount Cotton State School on Sunday, May 2, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...