alex Certify 50‌ ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಜೀವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50‌ ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಜೀವಿ

ಸೊಮಾಲಿ ಸೆಂಗಿ ಎಂಬ ಇಲಿ ಗಾತ್ರದ ಸಸ್ತನಿಯೊಂದನ್ನು ವಿಜ್ಞಾನಿಗಳು ಮತ್ತೊಮ್ಮೆ ಪತ್ತೆ ಮಾಡಿದ್ದಾರೆ. ಈ ಸಸ್ತನಿಯನ್ನು ಮೊದಲ ಬಾರಿಗೆ 1970ರಲ್ಲಿ ದಾಖಲಿಸಲಾಗಿತ್ತು.

ಆಫ್ರಿಕಾದ ಈಶಾನ್ಯ ಪ್ರದೇಶದಲ್ಲಿ ಈ ಜೀವಿಗಳು ವಾಸಿಸುತ್ತಿದ್ದರೂ ಸಹ ಅವುಗಳ ಬಗ್ಗೆ ವೈಜ್ಞಾನಿಕ ಮಾಹಿತಿಯ ಕೊರತೆ ಇದೆ. ಇಲಿ ಗಾತ್ರದ್ದಾದರೂ ಸಹ ಈ ಸೋಮಾಲಿ ಸೆಂಗಿಗಳು ಆನೆಗಳಿಗೆ ಹತ್ತಿರದ ಸಂಬಂಧಿಗಳಂತೆ. ಆನೆಗಳು, ಆದ್ವಾರ್ಕಗಳು ಹಾಗೂ ಮನಟೀಗಳಿಗೆಲ್ಲಾ ಒಂದೇ ಬಗೆಯಲ್ಲಿ ಸೊಂಡಿಲುಗಳಿವೆ.

ಚೂಪಾದ ಮೂತಿಯನ್ನು ಬಳಸಿಕೊಂಡು ಎಲೆಗಳ ಮಧ್ಯೆ ತೂರಿಕೊಂಡು ಕ್ರಿಮಿಗಳನ್ನು ಹುಡುಕುತ್ತಾ ಹೋಗುವ ಈ ಸೆಂಗಿಗಳಿಗೆ ಉದ್ದವಾದ ಹಿಂಗಾಲುಗಳಿದ್ದು, ಚುರುಕಾಗಿ ಓಡಬಲ್ಲವಾಗಿವೆ. ಇವುಗಳು 30ಕಿಮೀ/ಗಂಟೆ ವೇಗದಲ್ಲಿ ಓಡಬಲ್ಲವು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...