alex Certify ಪುಟ್ಟ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಪಟ್ಟಣಗಳಲ್ಲಿ ಹೆಚ್ಚಾಗುತ್ತಿದೆ ಮಹಿಳೆಯರ ಮೇಲಿನ ದೌರ್ಜನ್ಯ

Small Town Women at Higher Risk of Facing Intimate Partner ...

ವಾಷಿಂಗ್ ಟನ್ ಸ್ಟೇಟ್ ವಿಶ್ವವಿದ್ಯಾಲಯ ನಡೆಸಿರುವ ಸಮೀಕ್ಷೆಯೊಂದರ ವರದಿ ಹೊರಬಿದ್ದಿದ್ದು, ಪುಟ್ಟ ಪಟ್ಟಣಗಳಲ್ಲಿನ ಮಹಿಳೆಯರು ಸಂಗಾತಿಗಳಿಂದಲೇ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ.

ಸಾಧಾರಣವಾಗಿ ಅಪರಾಧ ಶಾಸ್ತ್ರದ ಪ್ರಕಾರ ಈ ಹಿಂದೆ ಹಳ್ಳಿಯ ಹೆಣ್ಣು ಮಕ್ಕಳು ನಿಕಟ ಸಂಗಾತಿಗಳಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇನ್ನೊಂದೆಡೆ ಅತಿ ಮುಂದುವರಿದ ಮಹಾನಗರಗಳಲ್ಲಿಯೂ ಸಂಗಾತಿಯಿಂದಲೇ ದೌರ್ಜನ್ಯ ನಡೆಯುತ್ತಿತ್ತು.

ಆದರೀಗ ಅತ್ತ ನಗರವೂ ಅಲ್ಲದ, ಹಳ್ಳಿಯೂ ಅಲ್ಲದಂತಹ ಪುಟ್ಟ ಪಟ್ಟಣಗಳಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉಪನಗರಗಳಲ್ಲೂ ಈ ಪ್ರಮಾಣ ಕಡಿಮೆ ಏನಿಲ್ಲ.

ಆದರೆ, ದೌರ್ಜನ್ಯ ಪ್ರಕರಣಗಳ ಏರುವಿಕೆಗೆ ಕಾರಣಗಳೇನು ಎಂಬುದನ್ನು ಅಧ್ಯಯನ ವರದಿ ಬಹಿರಂಗಪಡಿಸಿಲ್ಲ. ಈ ಕುರಿತು ಅಧ್ಯಯನಕಾರ ಕ್ಯಾಥರೀನ್ ಡುಬಯೋಸ್ ಹೇಳುವಂತೆ, ಮಹಾನಗರಗಳಿಗಿಂತ ಪುಟ್ಟ ಪಟ್ಟಣದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಶೇ.27 ರಷ್ಟು ಹೆಚ್ಚಿದ್ದರೆ, ಉಪನಗರಗಳಲ್ಲಿ ಶೇ.42 ಕ್ಕಿಂತ ಹೆಚ್ಚಿದೆ. ಅತ್ತ ಹಳ್ಳಿಯೂ ಅಲ್ಲದ, ಇತ್ತ ಮಹಾನಗರವೂ ಅಲ್ಲದ ಈ ಪ್ರದೇಶಗಳಲ್ಲಿ ಆರ್ಥಿಕ ಹಿನ್ನಡೆ ಇದ್ದೇ ಇರುತ್ತದೆ. ವಿಶೇಷ ಸವಲತ್ತುಗಳು ಸಿಗುವುದಿಲ್ಲ. ಅದರಲ್ಲೂ ದೌರ್ಜನ್ಯ ಪ್ರಕರಣಗಳಲ್ಲಿ ನೆರವು ಪಡೆಯುವ ವ್ಯವಸ್ಥೆಗಳೂ ಅಷ್ಟಕ್ಕಷ್ಟೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...