alex Certify ನೋಡನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದ ಸ್ಕೈ ಡೈವರ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದ ಸ್ಕೈ ಡೈವರ್ ಗಳು

ಸ್ಕೈ ಡೈವಿಂಗ್ ಸಾಹಸದಲ್ಲಿ ತೊಡಗಿದ್ದ ಇಬ್ಬರು ನೆಲಕ್ಕಪ್ಪಳಿಸಿದ ವಿಡಿಯೋ ವೈರಲ್ ಆಗಿದೆ.

ಫ್ಲೋರಿಡಾದ ಟೈಟಸ್ವಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ವಿಮಾನದಿಂದ ಕೆಳಗೆ ಧುಮುಕಿದ ಇಬ್ಬರು ಸಾಹಸಿಗಳು ಮನೆಯೊಂದರ ಮುಂದಿನ‌ ಮರದ ಮೇಲೆ ಬಿದ್ದು ಬಳಿಕ ನೆಲಕ್ಕೆ ಅಪ್ಪಳಿಸಿದರು.

ಅಸಮರ್ಪಕವಾದ ಹಾಗೂ ಕ್ರಮವಲ್ಲದ ರೀತಿಯ ಸ್ಕೈ ಡೈವಿಂಗ್ ನಿರ್ವಹಣೆ ಕಾರಣದಿಂದ ಅವರು ನೆಲಕ್ಕಪ್ಪಳಿಸಿದರು ಎಂದು ಹೇಳಲಾಗುತ್ತಿದೆ. ವ್ಯಕ್ತಿಯೊಬ್ಬರು ಇವರಿಬ್ಬರು ಕೆಳಗೆ ಧುಮುಕುವ ವೀಡಿಯೋವನ್ನು ಮೊಬೈಲ್ ನಲ್ಲಿ ಶೂಟ್ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಆರಂಭದಲ್ಲಿ ಅವರಿಬ್ಬರು ಮೋಜಿಗಾಗಿ ಈ ರೀತಿ ತಿರುತಿರುಗಿ ಬರುತ್ತಿದ್ದಾರೆಂದು ಭಾವಿಸಿದ್ದರಂತೆ. ಆದರೆ ನೆಲಕ್ಕೆ ಅಪ್ಪಳಿಸಿದಾಗ ಸಮಸ್ಯೆಗೆ ಸಿಲುಕಿದ್ದು ಗೊತ್ತಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತಕ್ಷಣವೇ ಅಗ್ನಿಶಾಮಕ ತಂಡ ಆಂಬುಲೆನ್ಸ್ ಸೇರಿ ಭದ್ರತಾ ಪಡೆ ಧಾವಿಸಿ ಅವರಿಬ್ಬರನ್ನು ರಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...