alex Certify BIG NEWS: ಕೊರೊನಾದ ಹೊಸ ಲಕ್ಷಣ ಪತ್ತೆ ಮಾಡಿದ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾದ ಹೊಸ ಲಕ್ಷಣ ಪತ್ತೆ ಮಾಡಿದ ವಿಜ್ಞಾನಿಗಳು

 

ಬ್ರಿಟನ್‌ನ ವೈದ್ಯಕೀಯ ವಿಜ್ಞಾನಿಗಳು ಕೊರೊನಾ ವೈರಸ್‌ನ ಹೊಸ ರೋಗ ಲಕ್ಷಣವನ್ನು ವರದಿ ಮಾಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯು ಇದನ್ನು ಕೊರೊನಾದ ಅಧಿಕೃತ ರೋಗಲಕ್ಷಣಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದೆ. ಸ್ಕಿನ್ ರಾಶಸ್ ಕೊರೊನಾದ ಲಕ್ಷಣವಾಗಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳು ಕರೋನದ ಹೊಸ ರೋಗಲಕ್ಷಣಗಳನ್ನು ಅಧ್ಯಯನ ಮಾಡಿದ್ದಾರೆ. ಪ್ರತಿ 11 ಕೊರನಾ ರೋಗಿಗಳಲ್ಲಿ ಒಬ್ಬರ ಚರ್ಮದ ಮೇಲೆ ದದ್ದುಗಳು ಇರುವುದು ಕಂಡು ಬಂದಿದೆ. ಕೊರೊನಾ ರೋಗಿಗಳಿಗೆ ಹಲವಾರು ವಾರಗಳವರೆಗೆ ಚರ್ಮದ ದದ್ದು ಸಮಸ್ಯೆ ಕಂಡು ಬಂದಿದೆ ಎಂದು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಮಾರಿಯೋ ಫಾಲ್ಚಿ ಹೇಳಿದ್ದಾರೆ.

ಲಂಡನ್‌ನ ಕಿಂಗ್ಸ್ ಕಾಲೇಜಿನ ವಿಜ್ಞಾನಿಗಳು 20 ಸಾವಿರ ಜನರನ್ನು ಅಧ್ಯಯನ ಮಾಡಿದ್ದಾರೆ. ಅಧ್ಯಯನದ ಸಮಯದಲ್ಲಿ, ಬ್ರಿಟನ್‌ನಲ್ಲಿ ಕೊರೊನಾ ಸೋಂಕಿಗೆ ಒಳಗಾದ ಶೇಕಡಾ 9 ಜನರಲ್ಲಿ ಚರ್ಮದ ದದ್ದುಗಳು ಕಂಡು ಬಂದಿವೆ ಎಂದು ತಿಳಿದು ಬಂದಿದೆ. ಕೊರೊನದ ಇತರ ರೋಗಲಕ್ಷಣಗಳೊಂದಿಗೆ ಶೇಕಡಾ 8 ರಷ್ಟು ಜನರಲ್ಲಿ ಚರ್ಮದ ದದ್ದು ಕಂಡು ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಸ್ತುತ, ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ಅಧಿಕೃತ ಪಟ್ಟಿಯಲ್ಲಿ ಕೊರೊನಾದ ಕೇವಲ ಮೂರು ಲಕ್ಷಣಗಳಿವೆ. ಜ್ವರ, ನಿರಂತರ ಕಫ, ಮತ್ತು ವಾಸನೆ ಮತ್ತು ರುಚಿಯ ಕೊರತೆ. ಅದೇ ಸಮಯದಲ್ಲಿ, ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಜ್ವರ, ಆಯಾಸ ಮತ್ತು ಒಣ ಕಫದ ಬಗ್ಗೆ ಮಾಹಿತಿಯು ಕೊರೊನದ ಸಾಮಾನ್ಯ ಲಕ್ಷಣಗಳಾಗಿವೆ. ಇದರೊಂದಿಗೆ, ಕೆಲವು ರೋಗಿಗಳಿಗೆ ಉಸಿರಾಟದ ತೊಂದರೆ, ದೇಹದ ನೋವು, ಉಸಿರಾಟ ತೊಂದರೆ, ಗಂಟಲು ನೋವು ಮತ್ತು ಅತಿಸಾರ ಲಕ್ಷಣಗಳು ಕಂಡುಬರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...