alex Certify ಅಚ್ಚರಿಯಾದರೂ ಇದು ಸತ್ಯ: ವಿವಾಹಿತ ದಂಪತಿಗೆ ಮಗು ಮಾಡುವ ವಿಧಾನವೇ ಗೊತ್ತಿರಲಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ಸತ್ಯ: ವಿವಾಹಿತ ದಂಪತಿಗೆ ಮಗು ಮಾಡುವ ವಿಧಾನವೇ ಗೊತ್ತಿರಲಿಲ್ಲ…!

ಇತ್ತೀಚಿನ ದಿನದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಮಗು ಮಾಡುವುದು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ದಂಪತಿಗಳಿಗೆ ಮದುವೆಯಾದ ವರ್ಷ ಕಳೆದರೂ ಮಕ್ಕಳು ಮಾಡುವುದು ಹೇಗೆ ಎನ್ನುವ ಬಗ್ಗೆ ಮಾಹಿತಿಯಿರಲಿಲ್ಲವಂತೆ.

ಹೌದು, ಅಚ್ಚರಿಯಾದರೂ ಇದು ಸತ್ಯ. ಈ ಅಚ್ಚರಿಯ ಮಾಹಿತಿಯನ್ನು ಮಿಡ್‌ ನರ್ಸ್‌ ರಚೆಲ್‌ ಹಿಯರ್‌ಸನ್‌, ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಈ ದಂಪತಿಗಳು ಇಂಟರ್‌ನೆಟ್‌ ಯುಗದ ಮೊದಲೇ ವಿವಾಹವಾಗಿದ್ದರಂತೆ. ಈ ದಂಪತಿಗಳಿಗೆ ಲೈಂಗಿಕ ಕ್ರಿಯೆಯ ಬಗ್ಗೆ ಎಳ್ಳಷ್ಟು ಗೊತ್ತಿರಲಿಲ್ಲವಂತೆ. ಮದುವೆಯಾದ ಮಾತ್ರಕ್ಕೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆಯಲ್ಲಿಯೇ ಜೀವನ ಸಾಗಿಸುತ್ತಿದ್ದರಂತೆ.

ಬಳಿಕ ವೈದ್ಯರ ಬಳಿ ಈ ದಂಪತಿಗಳು ಬಂದಾಗ, ವೈದ್ಯರು ಲೈಂಗಿಕತೆಯ ಬಗ್ಗೆ ಪ್ರಶ್ನಿಸಿದ್ದು, ಈ ಬಗ್ಗೆ ಅಚ್ಚರಿಯಿಂದ ಕೇಳಿಸಿಕೊಂಡಿದ್ದಾರೆ. ಬಳಿಕ ಈ ದಂಪತಿಯನ್ನು ರಚೆಲ್‌ ಬಳಿ ಆಪ್ತ ಸಮಾಲೋಚನೆಗೆ ಬಂದಾಗ, ಪುನಃ ಈ ವಿಷಯ ವಿಚಾರಿಸಿದರೂ, ಲೈಂಗಿಕತೆ ಎಂದರೆ ಏನು ಎನ್ನುವುದು ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.

ಆದರೆ ಈ ಬಗ್ಗೆ ಮಾಹಿತಿ ನೀಡಿದ ಕೆಲ ದಿನಗಳ ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. “ಹ್ಯಾಂಡಲ್‌ ವಿತ್‌ ಕೇರ್‌; ಕನ್ಫೆಷನ್‌ ಆಫ್‌ ಎನ್‌ಎಚ್‌ಎಸ್‌ ಹೆಲ್ತ್‌ ವಿಸಿಟರ್‌” ಎನ್ನುವ ಪುಸ್ತಕದಲ್ಲಿ ತಮ್ಮ ನಾಲ್ಕು ದಶಕದ ಅನುಭವವನ್ನು ಬರೆದುಕೊಂಡಿದ್ದಾರೆ. ಅದರಲ್ಲಿ ಈ ರೀತಿ ನೂರಾರು ಅಚ್ಚರಿಯ ಘಟನೆಗಳಿವೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...