alex Certify ಕೊರೊನಾ ಲಸಿಕೆ ಪಡೆಯಲು ದುಬಾರಿ ಉಡುಗೆ ಧರಿಸಿ ಬಂದ ಮಹಿಳೆ…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಪಡೆಯಲು ದುಬಾರಿ ಉಡುಗೆ ಧರಿಸಿ ಬಂದ ಮಹಿಳೆ…! ಇದರ ಹಿಂದಿದೆ ಈ ಕಾರಣ

ಕೊರೊನಾ ವೈರಸ್​ನಿಂದಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನ ಆಯೋಜಿಸೋದೇ ಭಾಗಶಃ ಕಡಿಮೆಯಾಗಿದೆ. ಹೆಚ್ಚಿನ ಸಮಯವನ್ನ ಜನರು ಮನೆಯಲ್ಲೇ ಕಳೆಯೋದ್ರಿಂದ ದುಬಾರಿ ವೆಚ್ಚದ ಉಡುಗೆಗಳನ್ನ ತೊಡುವುದೇ ಕಡಿಮೆಯಾಗಿ ಹೋಗಿದೆ.

ಆದರೆ ಬಾಲ್ಟಿಮೋರ್​ನ ಮಹಿಳೆಯೊಬ್ಬರು ಕೊರೊನಾ ಲಸಿಕೆಯನ್ನ ಪಡೆದುಕೊಳ್ಳಲು ತಮ್ಮ ಆರತಕ್ಷತೆಗೆಂದು ತಯಾರಿಸಿದ್ದ ಗೌನ್​ ಧರಿಸಿ ಹೋಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಎಂ & ಟಿ ಬ್ಯಾಂಕ್​ ಸ್ಟೇಡಿಯಂಗೆ ಆಗಮಿಸಿದ 39 ವರ್ಷದ ಸ್ಟಡ್ಲಿ ಪೊಲ್ಕಾ ಡಿಸೈನ್​ವುಳ್ಳ ಗೌನ್​ ಧರಿಸಿ ಬಂದು ಲಸಿಕೆಯನ್ನ ಸ್ವೀಕರಿಸಿದ್ದಾರೆ. ಈ ಸುಂದರ ಗೌನ್​ನ್ನ ಸ್ಟಡ್ಲಿ ತಮ್ಮ ವಿವಾಹ ಆರತಕ್ಷತೆಗಾಗಿ ರೆಡಿ ಮಾಡಿಸಿದ್ದರಂತೆ. ಆದರೆ ಕೊರೊನಾದಿಂದಾಗಿ ಈ ಕಾರ್ಯಕ್ರಮ ರದ್ದಾಗಿತ್ತು

ಸ್ಟಡ್ಲಿ ಹಾಗೂ ಬ್ರೇನ್​ ಹೊರ್ಲೊರ್​​ 2019ರ ನವೆಂಬರ್​ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ರು. ಆದರೆ ಕೊರೊನಾದಿಂದಾಗಿ ಅವರ ಆರತಕ್ಷತೆ ಕಾರ್ಯಕ್ರಮ ನೆರವೇರಿರಲಿಲ್ಲ. ಕುಟುಂಬಕ್ಕಾಗಿ ಒಂದು ಸಣ್ಣ ಔತಣಕೂಟವನ್ನ ಮಾತ್ರ ಏರ್ಪಡಿಸಲಾಗಿತ್ತು.

ಹೀಗಾಗಿ ಇದೀಗ ಕೊರೊನಾ ಲಸಿಕೆ ಅಭಿಯಾನಗಳು ಶುರುವಾಗಿದ್ದು ಸ್ಟಡ್ಲಿ ತಮ್ಮ ಆರತಕ್ಷತೆಗೆಂದು ತಯಾರಿಸಿದ್ದ ಉಡುಪನ್ನೇ ಧರಿಸಿ ಬಂದು ತಮ್ಮ ಮೊದಲ ಡೋಸ್​ ಲಸಿಕೆಯನ್ನ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...