alex Certify ಇಲ್ನೋಡಿ…! ಇಡೀ ವಿಶ್ವದ ಗಮನಸೆಳೆದಿದೆ ಈ ಅಧ್ಯಯನ ವರದಿ: ಕೊರೋನಾ ವೈರಸ್ ಕೊಲ್ಲಲು ಹಾವಿನ ವಿಷ ಪರಿಣಾಮಕಾರಿಯಂತೆ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ನೋಡಿ…! ಇಡೀ ವಿಶ್ವದ ಗಮನಸೆಳೆದಿದೆ ಈ ಅಧ್ಯಯನ ವರದಿ: ಕೊರೋನಾ ವೈರಸ್ ಕೊಲ್ಲಲು ಹಾವಿನ ವಿಷ ಪರಿಣಾಮಕಾರಿಯಂತೆ…!!

ಹೊಸ ಅಧ್ಯಯನವೊಂದು ಹಾವಿನ ವಿಷ ಕೊರೋನವೈರಸ್ ವಿರುದ್ಧ ಹೋರಾಡುವ ಸಾಧನವಾಗಿ ಪರಿಣಮಿಸುತ್ತದೆ ಎಂದು ಹೇಳಿದೆ. ಇದನ್ನು ಬ್ರೆಜಿಲ್‌ನ ಸಂಶೋಧಕರು ನಡೆಸಿದ್ದಾರೆ. ವೈಜ್ಞಾನಿಕ ನಿಯತಕಾಲಿಕದಲ್ಲಿ ವರದಿ ಪ್ರಕಟಿಸಲಾಗಿದೆ.

ಜರರಾಕುಸು ಪಿಟ್ ವೈಪರ್‌ನಿಂದ ಉತ್ಪತ್ತಿಯಾದ ಅಣುವು ಕೊರೋನಾ ವೈರಸ್‌ನ ಸಾಮರ್ಥ್ಯವನ್ನು ಶೇಕಡ 75 ರಷ್ಟು ಮಣಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಕೋತಿಗಳ ಮೇಲೆ ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ಇಂತಹುದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಈಗಾಗಲೇ ಹೆಸರುವಾಸಿಯಾಗಿರುವ ಪೆಪ್ಟೈಡ್ ಅನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಬಹುದು ಎಂದು ಸಾವೊ ಪಾಲೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಅಧ್ಯಯನದ ಲೇಖಕ ರಾಫೆಲ್ ಗೈಡೊ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಹಾವುಗಳನ್ನು ಸೆರೆಹಿಡಿಯುವುದು ಅಥವಾ ಬೆಳೆಸುವುದು ಅನಗತ್ಯವಾಗಿದೆ. ವಿಜ್ಞಾನಿಗಳು ಕೋವಿಡ್ -19 ಕ್ಕೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡಲು ಔಷಧದತ್ತ ಗಮನಹರಿಸುವುದು ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.

ಮಾನವ ಜೀವಕೋಶಗಳಲ್ಲಿ ಹಾವಿನ ವಿಷ ಪರೀಕ್ಷಿಸಲು ಆಶಿಸಿದ್ದಾರೆ. ಆದರೆ, ಅದಕ್ಕಾಗಿ ಯಾವುದೇ ಟೈಮ್‌ಲೈನ್ ನೀಡಿಲ್ಲ. 6 ಅಡಿ(2 ಮೀಟರ್) ಉದ್ದವಿರುವ ಬ್ರೆಜಿಲ್‌ನ ಅತಿ ದೊಡ್ಡ ಹಾವುಗಳಲ್ಲಿ ಜರರಾಕುಸು ಒಂದಾಗಿದೆ. ಇದು ಕರಾವಳಿಯ ಅಟ್ಲಾಂಟಿಕ್ ಅರಣ್ಯದಲ್ಲಿ ವಾಸಿಸುತ್ತದೆ ಮತ್ತು ಬೊಲಿವಿಯಾ, ಪರಾಗ್ವೆ ಮತ್ತು ಅರ್ಜೆಂಟೀನಾದಲ್ಲಿಯೂ ಕಂಡುಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...