alex Certify ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

Santa Claus Bikers Organise Socially-distanced Annual Parade in Tokyo Against Child Abuse

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ.

2008ರಲ್ಲಿ ಸ್ಥಾಪನೆಯಾದ ’ಹಾರ್ಲೆ ಸಾಂಟಾ ಕ್ಲಬ್‌’ ಪ್ರತಿ ವರ್ಷದ ಕ್ರಿಸ್‌ಮಸ್ ವೇಳೆ ಈ ಪರೇಡ್ ನಡೆಸಿಕೊಂಡು ಬರುತ್ತಿದೆ. ಪರೇಡ್ ಆದ ಕೂಡಲೇ ಟಾಯ್ ರನ್ ಮೂಲಕ ಮಕ್ಕಳಿಗೆ ಉಡುಗೊರೆಯಾಗಿ ಆಟಿಕೆಗಳನ್ನು ಕೊಡುತ್ತಾರೆ ಈ ಬೈಕರ್‌ಗಳು.

ಕೊರೋನಾ ವೈರಸ್ ವರ್ಷದಲ್ಲಿ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಆಗುತ್ತಿವೆ ಎನ್ನುತ್ತಾರೆ ಬೈಕರ್‌ಗಳು. “ಕೆಲಸ ಕಳೆದುಕೊಂಡ ಸ್ಟ್ರೆಸ್‌ ಅನ್ನು ತಮ್ಮ ಮಕ್ಕಳ ಮೇಲೆ ಪೋಷಕರು ಕಾರಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಲಾಕ್‌ಡೌನ್ ಆಗಿರುವ ಕಾರಣದಿಂದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಹಾಗಾಗಿ ಈ ಪರೇಡ್ ‌ಅನ್ನು ಆಯೋಜನೆ ಮಾಡಿದ್ದೇವೆ” ಎನ್ನುತ್ತಾರೆ ಪರೇಡ್‌ನಲ್ಲಿ ಭಾಗಿಯಾಗಿದ್ದ ಬೈಕರ್‌ ಟಕಾಶಿ ಮೈನ್.

ಕಳೆದ ವರ್ಷಕ್ಕಿಂತ ಈ ಬಾರಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಜಪಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...