alex Certify ಶಾಲಾ ಶೌಚಾಲಯದಲ್ಲಿ ರೇವ್​ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಶೌಚಾಲಯದಲ್ಲಿ ರೇವ್​ ಪಾರ್ಟಿ ಆಯೋಜಿಸಿ ಸಿಕ್ಕಿಬಿದ್ದ ಬಾಲಕ..!

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​​ನ 12 ವರ್ಷದ ಬಾಲಕ ಶಾಲೆಯ ಶೌಚಾಲಯದಲ್ಲಿ ರೇವ್​ ಪಾರ್ಟಿಯನ್ನ ಆಯೋಜಿಸುವ ಸಾಹಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕಿದ್ದಾನೆ.

ಕೇಲ್​ ಬೆಲ್​ ಸೇಂಟ್​ ಆಂಥೋನಿ ಕ್ಯಾಥೋಲಿಕ್​ ಶಾಲೆಯ ವಿದ್ಯಾರ್ಥಿ ತನ್ನ ಸಹಪಾಠಿಗಳಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದನು. ಸ್ನಾಪ್​ಚಾಟ್​​ನಲ್ಲಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ.

30 ನಿಮಿಷಗಳ ಕಾಲ ಈ ರೇವ್​ ಪಾರ್ಟಿ ಸುಗಮವಾಗಿ ಸಾಗಿದೆ. ಆದರೆ ಬಳಿಕ ಶಾಲಾ ಸಿಬ್ಬಂದಿಗೆ ಈ ಪಾರ್ಟಿಯ ಬಗ್ಗೆ ಮಾಹಿತಿ ರವಾನೆಯಾಗಿದ್ದು, ಶೌಚಾಲಯಕ್ಕೆ ಆಗಮಿಸಿದ ಶಾಲಾ ಸಿಬ್ಬಂದಿ ಎಲ್ಲಾ ಸ್ಪೀಕರ್​ ಹಾಗೂ ದೀಪಗಳನ್ನ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸ್ವತಃ ವಿದ್ಯಾರ್ಥಿಯ ತಾಯಿ ಮಗನ ರೇವ್​ ಪಾರ್ಟಿಯ ವಿಡಿಯೋಗಳನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಡಿಜೆ ನುಡಿಸುವ ಪ್ರತಿಭೆಗೆ ಭೇಷ್​ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...