alex Certify ಮೈಮೇಲೆ ನೀರು ಬೀಳ್ತಿದ್ದಂತೆ ಬೆಚ್ಚಿಬಿದ್ಲು ವರದಿಗಾರ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಮೇಲೆ ನೀರು ಬೀಳ್ತಿದ್ದಂತೆ ಬೆಚ್ಚಿಬಿದ್ಲು ವರದಿಗಾರ್ತಿ…!

ಒಟ್ಟಾವಾ: ಕೆನಡಾದ ಟಿವಿ ವರದಿಗಾರ್ತಿಯೊಬ್ಬಳು ವರದಿ ‌ಮಾಡುವ ಸಮಯದಲ್ಲಿ ಸ್ಪಿಂಕ್ಲರ್ ನೀರಿನಿಂದ ತೊಯ್ದಳು. ಆಕೆಯ ತಕ್ಷಣದ ಪ್ರತಿಕ್ರಿಯೆ ವಿಡಿಯೋದಲ್ಲಿ ದಾಖಲಾಗಿದ್ದು, ಆ ಕ್ಲಿಪ್ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಗ್ಲೋಬಲ್ ನ್ಯೂಸ್ ವರದಿಗಾರ್ತಿ ಶೆಲ್ಲಿ ಸ್ಟೀವ್ಸ್ ಅವರು ಕೃಷಿಯಲ್ಲಿ ಸ್ಪಿಂಕ್ಲರ್ ಅಂತರದ ಬಗ್ಗೆ ಹೊಲದಲ್ಲಿ ನಿಂತು ಲೈವ್ ವರದಿ‌ ಮಾಡುತ್ತಿದ್ದರು. ಸ್ಪಿಕ್ಲರ್ ಹೊಲಕ್ಕೆ ನೀರು ಚಿಮುಕಿಸುತ್ತ ಸುತ್ತು ಹೊಡೆದು ಬಂದು ಸ್ಟೀವ್ಸ್ ಅವರನ್ನು ಒದ್ದೆ ಮಾಡಿತು. ಇದರ ವಿಡಿಯೋವನ್ನು ಗ್ಲೋಬಲ್ ನ್ಯೂಸ್ ಸ್ವತಃ ತನ್ನ ಫೇಸ್ ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. “ತಾವು ವರದಿ ಮಾಡುವಾಗ ಸುತ್ತಲಿನ ಆಗುಹೋಗುಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಬ್ರುನ್ ಸ್ವಿಕ್ ನ ಶೆಲ್ಲಿ ಸ್ಟೀವ್ಸ್ ಅವರಿಗೆ ಗ್ಲೋಬಲ್ ನ್ಯೂಸ್ ಜ್ಞಾಪಿಸುತ್ತದೆ” ಎಂದು ಕ್ಯಾಪ್ಶನ್ ನೀಡಲಾಗಿದೆ.

ವಿಡಿಯೋಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಒಬ್ಬರು “ಅದು ಬರೀ ನೀರು ಮಾರಾಯ್ತಿ ಗೊಬ್ಬರವಲ್ಲ” ಎಂದಿದ್ದಾರೆ. ಇನ್ನೊಬ್ಬರು, “ವಿಡಿಯೋಗ್ರಾಫರ್ ಗೆ ಆಕೆಯ ಮೇಲೆ ಸಿಟ್ಟಿರಬೇಕು, ಸ್ಪಿಂಕ್ಲರ್ ಆಕೆಯ ಮೇಲೆ ನೀರೆರಚುವವರೆಗೂ ಎಚ್ಚರಿಸದೇ ಕಾಯುತ್ತಿದ್ದ” ಎಂದಿದ್ದಾರೆ. ಮತ್ತೊಬ್ಬರು “ಆಕೆಯ ಪ್ರತಿಕ್ರಿಯೆ ಅತೀ ಹೆಚ್ಚು ಹಾಸ್ಯಾಸ್ಪದವಾಗಿದೆ” ಎಂದಿದ್ದಾರೆ.

Shelley Steeves meets a sprinkler

A reminder from Global News New Brunswick's Shelley Steeves that reporters should always be aware of their surroundings. Also see: https://globalnews.ca/news/6229978/pig-chases-journalist-video/

Posted by Global News on Wednesday, August 26, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...