alex Certify ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….!

ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಿಮ್ಮಲ್ಲಿದ್ರೆ ಯಾವ ಸವಾಲು ಕೂಡ ನಿಮಗೆ ದೊಡ್ಡದು ಎಂದೆನಿಸಲ್ಲ.

ಅಮೆರಿಕದ 62 ವರ್ಷದ ಜೊಸೆಫ್​ ವಾಲ್​ಡೇಜ್​ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ ಮೂಲಕ ಈ ಮಾತಿಗೆ ಸಾಕ್ಷಿಯಾಗಿದ್ದಾರೆ.

ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದ ವಾಲ್​ಡೇಜ್​ ತಮ್ಮ ಜೀವನದ ಬಹು ವರ್ಷಗಳನ್ನ ಜೈಲಿನಲ್ಲಿ ಕಳೆದಿದ್ದರು. ಆದರೆ ಇಂದು ಅವರು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ವಾಲ್ಡೇಜ್​ರ ಈ ಜೀವನಗಾಥೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಹಾಗೂ ಸಾಕಷ್ಟು ನೆಟ್ಟಿಗರು ವಾಲ್ಡೇಜ್​ರ ಸಾಧನೆಯನ್ನ ಕೊಂಡಾಡಿದ್ದಾರೆ.

ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..!

ನನ್ನ ತಾಯಿ 14 ವರ್ಷದ ಹಿಂದೆ ನಿಧನರಾದ್ರು. ಆದರೆ ಆಕೆ ಎಂದಿಗೂ ನನ್ನ ಮೇಲಿನ ಭರವಸೆಯನ್ನ ಕಳೆದುಕೊಂಡಿರಲಿಲ್ಲ. ಆಕೆ ನನ್ನನ್ನ ಎಂದಿಗೂ ಬುದ್ಧಿವಂತೆ ಎಂದೇ ಕರೆಯುತ್ತಿದ್ದಳು ಎಂದು ಸಂದರ್ಶನವೊಂದರಲ್ಲಿ ವಾಲ್ಡೇಜ್​ ಹೇಳಿಕೊಂಡಿದ್ದಾರೆ.

— Spence (@_SupHolmes) February 15, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...