alex Certify ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನನ್ನ ತಾನೇ ಗುರುತಿಸಲಾಗದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಈ ಮಹಿಳೆ..!

ಲೌರೆನ್​ ನಿಕೋಲ್​ ಜೋನ್ಸ್ ಎಂಬಾಕೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಈಕೆಗೆ ಫೋಟೋ ಆಲ್ಬಂಗಳಲ್ಲಿ ತನ್ನ ಕುಟುಂಬಸ್ಥರ ಮುಖವೇ ನೆನಪು ಹೋಗುತ್ತದೆಯಂತೆ.

ಈಕೆಯ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಒಮ್ಮೊಮ್ಮೆ ಆಕೆಗೆ ತನ್ನ ಮದುವೆ ಆಲ್ಬಂನಲ್ಲಿ ತನ್ನ ಮುಖವೇ ಗುರುತು ಸಿಗೋದಿಲ್ಲವಂತೆ.

33 ವರ್ಷದ ಲೌರೆನ್​​ ಮುಖ ಕುರುಡು ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಸಮಸ್ಯೆ ಉಳ್ಳವರು ತಮ್ಮ ಪರಿಚಯಸ್ಥರ ಮುಖವನ್ನೇ ಮರೆತು ಬಿಡ್ತಾರೆ. ಒಮ್ಮೊಮ್ಮೆ ತಮ್ಮ ಮುಖವನ್ನೇ ತಾವು ಮರೆಯುವುದುಂಟು..!

ಇನ್ನು ಈ ವಿಚಾರವಾಗಿ ಮಾತನಾಡಿರುವ ಲೌರೆನ್​, ನನ್ನ ಮದುವೆ ಆಲ್ಬಂನಲ್ಲೇ ನನ್ನನ್ನ ನನಗೆ ಗುರುತಿಸಲು ಸಾಧ್ಯವಾಗಲಿಲ್ಲ. ನಾನು ಮದುವೆಗೆ ಧರಿಸಿದ್ದ ಗೌನ್​ ನೆನಪಿದ್ದರಿಂದ ನನಗೆ ಅದು ನಾನೇ ಎಂದು ತಿಳಿಯಿತು ಎಂದಿದ್ದಾಳೆ.

ಈ ಸಮಸ್ಯೆ ಎಷ್ಟರ ಮಟ್ಟಿಗೆ ತೀವ್ರವಾಗಿದೆಯೆಂದರೆ ಆಕೆಗೆ ತನ್ನ ಸ್ನೇಹಿತೆಯ ಮುಖವೂ ಮರೆತು ಹೋಗಿಬಿಡುತ್ತೆ. ಸೆಲೆಬ್ರಿಟಿಗಳ ಮುಖವನ್ನೂ ಲೌರೆನ್​ ಮರೆತುಬಿಡ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...