alex Certify ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…!

Red-Tailed Cockatoo Turns Cupid, Helps Australian Man Propose to Girlfriend

ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್‌ ಸಂತಸ ಹೇಳಿಕೊಳ್ಳುವುದು ಅಸಾಧ್ಯ.

ಪ್ರಣಯ ಪಕ್ಷಿಗಳಾದ ಜೆಸ್ ಹಾಗೂ ಎರಿನ್ ಆಸ್ಟ್ರೇಲಿಯಾದ ಮೃಗಾಲಯವೊಂದಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ತನ್ನ ಮನದನ್ನೆ ಬಳಿ ಪ್ರೇಮನಿವೇದನೆ ಮಾಡಿಕೊಳ್ಳಲು ಮುಂದಾದ ಯುವಕನಿಗೆ ಅಲ್ಲಿದ್ದ ಕೊಕಟೂ ಪಕ್ಷಿ ಪ್ರೇಮದೈವನಾಗಿ ಹರಸಿದೆ.

ತನ್ನ ಮನದಾಳದ ಆ ಮಾತನ್ನು ಪತ್ರದಲ್ಲಿ ಬರೆದಿದ್ದ ಯುವಕ, ಮೃಗಾಲಯದ ಸಿಬ್ಬಂದಿಯ ನೆರವಿನಿಂದ ಯೂಲಿ ಹೆಸರಿನ ಈ ಕುಕಟೂ ಪಕ್ಷಿಯ ಮೂಲಕ ತನ್ನ ಪಕ್ಕದಲ್ಲೇ ಕುಳಿತಿದ್ದ ಮನದನ್ನೆಗೆ ಕಳುಹಿಸಿದ್ದಾನೆ. ಅನಿರೀಕ್ಷಿತವಾಗಿ ಬಂದ ಈ ಪ್ರಪೋಸಲ್ ‌ಅನ್ನು ನೋಡಿ ಚಕಿತಳಾದ ಆತನ ಪ್ರೇಯಸಿ, ’ಎಸ್‌’ ಎಂದಿದ್ದು, ಪ್ರಹಸನ ಸುಖಾಂತ್ಯದಲ್ಲಿ ಅಂತ್ಯಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...