alex Certify ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ.

ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ ಉದ್ದದ ರೆಡ್ ಟೇಲ್ಡ್ ಬೋ ಎನ್ನುವ ಹೆಬ್ಬಾವು ಕಾಣಿಸಿಕೊಂಡಿದೆ. ಗಾರ್ಡನ್‌ನಲ್ಲಿ ವಾಕಿಂಗ್‌ಗೆಂದು ಬಂದ ಅನೇಕರು ಈ ಹಾವನ್ನು ನೋಡಿ ಅವಾಕ್ಕಾಗಿ, ಸ್ಥಳೀಯ‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಆರಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸ್ಥಳೀಯ ಪೊಲೀಸ್ ಠಾಣೆಗೆ ರವಾನಿಸಲಾಗಿದೆ.

ಈ ಬಗ್ಗೆ ಪೊಲೀಸರು ಮಾತನಾಡಿದ್ದು, ಈ ರೀತಿ‌ವನ್ನು ಕೆಲವರು ಸಾಕುತ್ತಿದ್ದಾರೆ. ಸಾಕುವವರು ಹಾವನ್ನು ಬೇಜವಾಬ್ದಾರಿಯುತವಾಗಿ ಬಿಡಬಾರದು. ಕೂಡಲೇ ಮೈಕ್ರೋ ಚಿಪ್‌ಗಳನ್ನು ಅಳವಡಿಸಬೇಕು ಎಂದಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...