alex Certify ಯುವತಿ ʼಪ್ರಪೋಸಲ್ʼ‌ ಗೆ ಒಪ್ಪಿಕೊಂಡ ಮರುಕ್ಷಣವೇ ನಡೆಯಿತು ದುರಂತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ʼಪ್ರಪೋಸಲ್ʼ‌ ಗೆ ಒಪ್ಪಿಕೊಂಡ ಮರುಕ್ಷಣವೇ ನಡೆಯಿತು ದುರಂತ…!

ಸೂರ್ಯಾಸ್ತ……ಶಿಖರದ ತುದಿ……ಆಹ್ಲಾದಕರ ವಾತಾವರಣ……ಮದುವೆಯ ಪ್ರಪೋಸಲ್ ಇಡಲು ಇದಕ್ಕಿಂತ ಇನ್ನೆಂಥಾ ಸೆಟ್ಟಿಂಗ್ ಇರಲು ಸಾಧ್ಯ ಅಲ್ಲವೇ?

ಈ ಐಡಿಯಾ ಬಹಳ ರೊಮ್ಯಾಂಟಕ್ ಅನಿಸಿದರೂ ಸಹ ಬಲೇ ರಿಸ್ಕಿ. ಭಾರೀ ಖುಷಿಯಲ್ಲಿ ಮೈಮರೆತು ಸ್ವಲ್ಪ ಆಯತಪ್ಪಿದರೂ ಯಮಲೋಕದ ಕದ ತಟ್ಟಬೇಕಾಗುತ್ತದೆ. ಇಂಥದ್ದೇ ಒಂದು ದುರಂತ ಆಸ್ಟ್ರಿಯಾದಲ್ಲಿ ಘಟಿಸಿದೆ.

ತನ್ನ ಬಾಯ್‌ಫ್ರೆಂಡ್ ಮುಂದಿಟ್ಟ ಪ್ರಪೋಸಲ್‌ಗೆ ’ಎಸ್‌’ ಎಂದ ಕೂಡಲೇ ಗುಡ್ಡವೊಂದರ ತುದಿಯಿಂದ 650 ಅಡಿ ಪ್ರಪಾತಕ್ಕೆ ಬಿದ್ದ ಯುವತಿಯೊಬ್ಬರು ಅದೃಷ್ಟವಶಾತ್‌, ಹಿಮದ ಕಾರ್ಪೆಟ್‌ ಮೇಲೆ ಬಿದ್ದು ಬದುಕುಳಿದಿದ್ದಾರೆ.

ಇಲ್ಲಿನ ಕಾರಿಂಥಿಯಾದ ಫಾಕಾರ್ಟ್ ಎಂಬಲ್ಲಿ ರೊಮ್ಯಾಂಟಿಕ್ ಕ್ಷಣದಲ್ಲಿ ಮಿಂದಿದ್ದ ಈ ಜೋಡಿ, ಈ ಸಡಗರದಲ್ಲಿ ಮೈಮರೆತಾಗ 32 ವರ್ಷದ ಗರ್ಲ್ ಫ್ರೆಂಡ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಕೆಯನ್ನು ಕಾಪಾಡಲು ಹೋದ 27ರ ಬಾಯ್‌ಫ್ರೆಂಡ್‌ ಗಾಳಿಯಲ್ಲಿ 50 ಅಡಿ ತೂರಿ ಬಿದ್ದಿದ್ದಾರೆ. ಇಬ್ಬರನ್ನೂ ಅಲ್ಲಿಯೇ ಇದ್ದ ಇನ್ನಿತರ ಮಂದಿ ಪೊಲೀಸರ ನೆರವಿನಿಂದ, ಹೆಲಿಕಾಪ್ಟರ್‌ ಮೂಲಕ ರಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...