alex Certify 12 ಗಂಟೆಯೊಳಗೆ ಅಮೆರಿಕಾದಲ್ಲಿ ದಾಖಲೆ ಬರೆದ ಪ್ರಿಯಾಂಕ ಪುಸ್ತಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ಗಂಟೆಯೊಳಗೆ ಅಮೆರಿಕಾದಲ್ಲಿ ದಾಖಲೆ ಬರೆದ ಪ್ರಿಯಾಂಕ ಪುಸ್ತಕ

प्र‍ियंका चोपड़ा

ಗ್ಲೋಬಲ್ ಐಕಾನ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಅನ್ ಫಿನಿಶ್ಡ್  ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಚಲನಚಿತ್ರಗಳ ಜೊತೆ ಬರವಣಿಗೆಯ ಜಗತ್ತಿನಲ್ಲಿಯೂ ಅವರು ಛಾಪು ಮೂಡಿಸಲು ಹೊರಟಿದ್ದಾರೆ. ಅವರ ಅನ್ ಫಿನಿಶ್ಡ್  ಪುಸ್ತಕ ಕಳೆದ 12 ಗಂಟೆಗಳಲ್ಲಿ ಅಮೆರಿಕದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ.

ಈ ಖುಷಿ ಸುದ್ದಿಯನ್ನು ನಟಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ, ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪುಸ್ತಕ ಹೆಚ್ಚು ಮಾರಾಟವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಪುಸ್ತಕವು ಕಳೆದ 24 ಗಂಟೆಗಳಲ್ಲಿ ಯುಎಸ್ ಬೆಸ್ಟ್ ಸೆಲ್ಲರ್ಸ್‌ನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಯುಎಸ್‌ನ ಟಾಪ್ 10 ಪುಸ್ತಕಗಳು ಬರೆದಿವೆ.

ಈ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ ಪ್ರಿಯಾಂಕಾ, ಯುಎಸ್ ನಲ್ಲಿ ಕಳೆದ 12 ಗಂಟೆಗಳಲ್ಲಿ ಪ್ರಥಮ ಸ್ಥಾನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು. ಪುಸ್ತಕವನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ ಎಂದು ಬರೆದಿದ್ದಾರೆ. ಪ್ರಿಯಾಂಕಾ ತನ್ನ ಜೀವನದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಘಟನೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆಯೇ ಪುಸ್ತಕ ಬರೆಯುತ್ತಿರುವುದಾಗಿ ಪ್ರಿಯಾಂಕ ಹೇಳಿಕೊಂಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...