alex Certify 600 ʼಕೀʼ ಗಳು ಬದಲಾಗಲು ಕಾರಣವಾಯ್ತು ಒಂದೇ ಒಂದು ತಪ್ಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

600 ʼಕೀʼ ಗಳು ಬದಲಾಗಲು ಕಾರಣವಾಯ್ತು ಒಂದೇ ಒಂದು ತಪ್ಪು…!

ಹೊಸ ಉದ್ಯೋಗಕ್ಕೆ ನೇಮಕಗೊಂಡ ಬಳಿಕ ಎಲ್ಲರ ಮೆಚ್ಚುಗೆ ಗಳಿಸಬೇಕು ಎಂಬ ವಿಚಾರ ಮೊದಲು ತಲೆಯಲ್ಲಿ ಬರುತ್ತೆ. ಆದರೆ ಜೈಲಿನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದ ವ್ಯಕ್ತಿ ಮಾತ್ರ ಈ ಮಾತಿಗೆ ವಿರುದ್ಧವಾದ ಕೆಲಸ ಮಾಡಿ ಪೇಚಿಗೆ ಸಿಲುಕಿದ್ದಾನೆ.

ತನ್ನ ಹೊಸ ಉದ್ಯೋಗದ ಬಗ್ಗೆ ಸ್ನೇಹಿತರ ಬಳಿ ಬಡಾಯಿ ಕೊಚ್ಚಿಕೊಳ್ಳಬೇಕು ಅಂತಾ ಸೆರೆಮನೆಯ ಕೀಗಳ ಫೋಟೋವನ್ನ ವಾಟ್ಸಾಪ್​ನಲ್ಲಿ ಸ್ನೇಹಿತರಿಗೆ ಕಳುಹಿಸಿದ್ದಾನೆ.

ಜರ್ಮನಿಯ ಜೈಲೊಂದರಲ್ಲಿ ತರಬೇತಿಗಾಗಿ ಸೇರಿದ್ದ ವ್ಯಕ್ತಿ ಈ ಕೆಲಸ ಮಾಡಿದ್ದಾನೆ. ಜೈಲಿನ ಒಳಗೆ ತಾನಿರುವ ಫೋಟೊಗಳನ್ನ ಸ್ನೇಹಿತರಿಗೆ ಕಳಿಸಿದ್ದಾನೆ. ಈ ಫೋಟೋದಲ್ಲಿ ಆತ ಸೆರೆಮನೆಯ ಎಲ್ಲಾ ಕೀಗಳ ಫೋಟೋವನ್ನೂ ಕಳಿಸಿರೋದಾಗಿ ಹೇಳಿದ್ದಾನೆ.

ಈ ಫೋಟೋದ ಸಹಾಯದಿಂದ ನಕಲಿ ಕೀಗಳನ್ನ ತಯಾರಿಸಬಹುದಾಗಿದೆ. ಹೀಗಾಗಿ ಈ ವ್ಯಕ್ತಿಯ ನಡೆ ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವು ತಂದಿದೆ. ಬಳಿಕ ಬೇರೆ ದಾರಿಯಿಲ್ಲದೇ ಜೈಲಿನ ಸೆರೆಮನೆ, ಪ್ರವೇಶ ದ್ವಾರ ಸೇರಿದಂತೆ ಒಟ್ಟು 600 ಕೀಗಳನ್ನ ಬದಲಾಯಿಸಲಾಗಿದೆ.

ಆತ ಕೇವಲ ತನ್ನ ಉದ್ಯೋಗದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಈ ಫೋಟೋ ಕಳಿಸಿದ್ದ. ಆದರೆ ಇದರಿಂದಾಗಿ ಸಂಪೂರ್ಣ ಸೆರೆಮನೆಯ ಕೀಗಳನ್ನೇ ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಕೀಗಳನ್ನ ಬದಲಾಯಿಸುವ ಕಾರ್ಯದಲ್ಲಿ 20 ಮಂದಿ ಸಿಬ್ಬಂದಿ ಭಾಗಿಯಾಗಿದ್ದರು. ಎಲ್ಲಾ ಹಳೆಯ ಕೀಗಳನ್ನ ನಾಶ ಮಾಡಲಾಗಿದೆ. ಈ ಎಲ್ಲಾ ಕೀಗಳನ್ನ ಬದಲಾಯಿಸೋಕೆ ಬರೋಬ್ಬರಿ 44 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎನ್ನಲಾಗಿದೆ.

ಇನ್ನು ಎಲ್ಲಾ ಸಂಕಷ್ಟಕ್ಕೆ ಕಾರಣನಾದ ವ್ಯಕ್ತಿಯ ತರಬೇತಿಯನ್ನ ಕೊನೆಗೊಳಿಸಿ ಜೈಲಿನಿಂದ ಹೊರಗಟ್ಟಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...