alex Certify ನೆಟ್ಟಿಗರ ಬಾಯಿಗೆ ಆಹಾರವಾದ ಪಾಕಿಸ್ತಾನದ ಪವರ್​ ಕಟ್​ ಸಮಸ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಬಾಯಿಗೆ ಆಹಾರವಾದ ಪಾಕಿಸ್ತಾನದ ಪವರ್​ ಕಟ್​ ಸಮಸ್ಯೆ…!

ಭಾನುವಾರ ಪಾಕಿಸ್ತಾನದಲ್ಲಿ ಸುದೀರ್ಘ 18 ಗಂಟೆಗಳ ಕಾಲ ಪವರ್​ ಕಟ್​ ಆಗಿತ್ತು. ಸುದೀರ್ಘ 18 ಗಂಟೆಗಳ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್​ ಸಂಪರ್ಕವನ್ನ ಸರಬರಾಜು ಮಾಡಲಾಗಿದೆ. 210 ದಶಲಕ್ಷಕ್ಕೂ ಹೆಚ್ಚು ಜನ ಸಂಖ್ಯೆಯಿರುವ ಪಾಕಿಸ್ತಾನದಲ್ಲಿ ವಿದ್ಯುತ್​ ಸರಬರಾಜು ಗ್ರಿಡ್​ನ ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿದ್ಯುತ್​ ಇಲಾಖೆ ಸಚಿವ ಓಮರ್​ ಅಯುಬ್​ ಖಾನ್​, ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಸುಮಾರು 18 ಗಂಟೆಗಳ ಕಾಲ ಪವರ್ ಕಟ್​ ಆಗಿದೆ. ತಾಂತ್ರಿಕ ದೋಷದಿಂದಾಗಿ ಈ ಸಮಸ್ಯೆ ಉಂಟಾಗಿದೆ. ವಿದ್ಯುತ್​ ಸ್ಥಾವರದ ದೋಷದಿಂದಾಗಿ ಈ ಕ್ರಮ ಕೈಗೊಳ್ಳೋದು ಅನಿವಾರ್ಯವಾಯ್ತು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಜನತೆ ಕರೆಂಟ್​ ಇಲ್ಲದೇ ಕಂಗೆಟ್ಟಿದ್ದರೆ ಟ್ವಿಟರ್​ ಹಾಗೂ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಈ ವಿಚಾರವನ್ನೇ ಮುಂದಿಟ್ಟುಕೊಂಡು ಟ್ರೋಲ್​ ಮೇಲೆ ಟ್ರೋಲ್​ ಮಾಡಲಾಗಿದೆ. ಅನೇಕರು ಪಾಕಿಸ್ತಾನ ರೀ ಸ್ಟಾರ್ಟ್​ ಆಗ್ತಿದೆ ಅಂತಾ ಲೇವಡಿ ಮಾಡಿದ್ರೆ ಇನ್ನೂ ಹಲವರು ಪಾಕ್​ನಲ್ಲಿ ನೈಟ್​ ಮೋಡ್​ ಆನ್​ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.

— kuddieee_girl (@khabasatNaKar) January 9, 2021

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...