alex Certify ಸಾಮಾಜಿಕ ಅಂತರ ಕಾಪಾಡಲು ಇಲ್ಲಿ ಮಾಡಿದ್ದಾರೆ ಸಖತ್ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರ ಕಾಪಾಡಲು ಇಲ್ಲಿ ಮಾಡಿದ್ದಾರೆ ಸಖತ್ ಪ್ಲಾನ್

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಅಂತರ ಕಾಪಾಡುವುದು ಸವಾಲಿನ ಕೆಲಸ.

ವಿಶ್ವದ ವಿವಿಧ ದೇಶಗಳಲ್ಲಿ ಜನರ ನಡುವೆ ಸಾಮಾಜಿಕ ಅಂತರ ಕಾಪಾಡಲು ಬಗೆ ಬಗೆಯ ಸಾಹಸಗಳು ನಡೆಯುತ್ತಿವೆ.

ಜರ್ಮನಿಯ ಕೆಫೆಯೊಂದರಲ್ಲಿ ವಿಚಿತ್ರ ಬಗೆಯ ಟೋಪಿಯನ್ನು ಗ್ರಾಹಕರ ತಲೆಗೆ ತೊಡಿಸಿ ಸಾಮಾಜಿಕ ಅಂತರ ಕಾಪಾಡಿದನ್ನು ಖಚಿತಪಡಿಸಿಕೊಳ್ಳಲಾಯಿತು.

ಅತಿ ಹಗುರವಾಗಿರುವ, ಈಜುಕೊಳದಲ್ಲಿ ಬಳಸುವಂತಹ ಪೂಲ್ ನೂಡಲ್ಸ್ ನ್ನು ಟೋಪಿಯ ರೀತಿಯಲ್ಲಿ ಬಳಸಿ ಕೆಫೆಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಸಾಮಾಜಿಕ ಅಂತರ ಕಾಪಾಡುವ ಸೃಜನಶೀಲತೆಯನ್ನು ಅನೇಕರು ಕೊಂಡಾಡಿದ್ದರೆ, ಮತ್ತೆ ಕೆಲವರಿಂದ ವಿನೋದಮಯ ಕಾಮೆಂಟ್ ಗಳೂ ಸಹ ಬಂದಿವೆ.

Heute mal so ,, Abstandsnachvermessung“

Posted by Cafe & Konditorei Rothe on Saturday, May 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...