alex Certify ಮನೆಯಲ್ಲೇ 200ಕ್ಕೂ ಹೆಚ್ಚು ಬಗೆಯ ಸಸಿ ಬೆಳೆಸಿದ ‘Plant Daddy’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ 200ಕ್ಕೂ ಹೆಚ್ಚು ಬಗೆಯ ಸಸಿ ಬೆಳೆಸಿದ ‘Plant Daddy’

ಮನೆಯಲ್ಲಿ ಗಿಡಗಳನ್ನು ಬೆಳೆಸುವ ಆರೋಗ್ಯಕರ ಹವ್ಯಾಸವನ್ನು ಬೆಳೆಸಿಕೊಂಡಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ 200ಕ್ಕೂ ಹೆಚ್ಚು ರೀತಿಯ ಸಸಿಗಳನ್ನು ಬೆಳೆಸಿದ್ದು, ಇದಕ್ಕೆಂದು $5000 (3.78 ಲಕ್ಷ ರೂ.) ವ್ಯಯಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಮಾಂಟೆರೆ ಎಂಬಲ್ಲಿರುವ ಸಿರಿಲ್ ಸೊಂಟಿಲ್ಲಾನೋ ಹೆಸರಿನ ಈ ವ್ಯಕ್ತಿ ತಾನು ಮನುಷ್ಯರಿಗಿಂತ ಸಸಿಗಳನ್ನು ಇಷ್ಟ ಪಡುವುದಾಗಿ ತಿಳಿಸಿದ್ದಾರೆ. ಈ ಸಸಿಗಳನ್ನು ತನ್ನ ಮಕ್ಕಳಂತೆ ಸಾಕುತ್ತಿರುವ ಈತ, ಪ್ರತಿನಿತ್ಯ ಅವಕ್ಕೆ ನೀರು/ಗೊಬ್ಬರ ಹಾಕಿ ಬಹಳ ಆಸ್ಥೆಯಿಂದ ಪೋಷಣೆ ಮಾಡುತ್ತಾ ಬಂದಿದ್ದಾರೆ.

ತನ್ನ ಈ ಕೈಂಕರ್ಯದಿಂದ ‘Plant Daddy’ ಎಂಬ ಅನ್ವರ್ಥ ನಾಮ ಪಡೆದುಕೊಂಡಿದ್ದಾರೆ ಸಿರಿಲ್. ತಾನು ಬೆಳೆಸಿದ ಸಸಿಗಳನ್ನು ತನ್ನ ಸ್ನೇಹಿತರಿಗೆ ಫೋಟೋಗಳ ಮೂಲಕ ಶೇರಿಂಗ್ ಮಾಡಿಕೊಂಡು ಖುಷಿ ಪಡುತ್ತಾರೆ ಸಿರಿಲ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...