alex Certify ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್

ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್‌ಗಳ ಈ ವಿಡಿಯೋದಲ್ಲಿ ತನ್ನ ಮಸ್ತ್‌ ಪ್ರತಿಭೆಯನ್ನು ತೋರಿದೆ.

ನಿಲ್ದಾಣದ ಸ್ವಯಂಚಾಲಿತ ಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಿರುವ ಈ ಹಂದಿಮರಿಯು ತನ್ನ ಬಾಯಿಯಲ್ಲಿ ಟಿಕೆಟ್‌ ಇಟ್ಟುಕೊಂಡು ಚೆಂಡಿನ ಮೇಲೆ ಉರುಳಿಕೊಂಡು ಸಾಗುತ್ತಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಅದಾಗಲೇ 12.1 ದಶಲಕ್ಷ ಮಂದಿ ವೀಕ್ಷಿಸಿದ್ದು, ’ಈ ಹಂದಿಮರಿ ನಿಲ್ದಾಣಕ್ಕೆ ಬಂದಿದ್ದಾರೂ ಹೇಗೆ?’, ’ಅದು ಎಲ್ಲಿಗೆ ಹೋಗುತ್ತಿದೆ?’ ಎಂದೆಲ್ಲಾ ತಲೆ ಕೆರೆದುಕೊಂಡು ಯೋಚಿಸುತ್ತಿದ್ದಾರೆ.

— Rex Chapman?? (@RexChapman) September 9, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...