alex Certify ಅಮೆರಿಕಾದ ಬೀದಿ ಬೀದಿಗಳಲ್ಲಿ ಬಿಡೆನ್ ಗೆಲುವಿನ ಸಂಭ್ರಮೋತ್ಸವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾದ ಬೀದಿ ಬೀದಿಗಳಲ್ಲಿ ಬಿಡೆನ್ ಗೆಲುವಿನ ಸಂಭ್ರಮೋತ್ಸವ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರೆಟ್ ಪಕ್ಷದ ಜೊ ಬಿಡೆನ್ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ದೇಶದ ವಿವಿಧೆಡೆ ಜನ ಬೀದಿಗಿಳಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಾಡು ನೃತ್ಯಗಳ ಮೂಲಕ ದೇಶದ ಹೊಸ ನಾಯಕನನ್ನು ಸ್ವಾಗತಿಸುತ್ತಿದ್ದಾರೆ.

ಟ್ವಿಟ್ಟರ್ ಖಾತೆಯೊಂದರಲ್ಲಿ ಅಪ್‌ಲೋಡ್ ಆಗಿರುವ ಜನರ ಸಂಭ್ರಮೋತ್ಸವದ ವಿಡಿಯೋವನ್ನು ನಟಿ ಹಾಗೂ ಹಾಡುಗಾರ್ತಿ ಮಿಲೈ ರೇ ಸೈರಸ್ ರಿ ಟ್ವೀಟ್ ಮಾಡಿದ್ದಾರೆ. ಅವರು ಹಾಡಿರುವ “ಪಾರ್ಟಿ ಇನ್‌ದ ಯುಎಸ್‌ಎ” ಹಾಡಿಗೆ ಜನ ಹುಚ್ಚೆದ್ದು, ಕುಣಿಯುತ್ತಿರುವ ವಿಡಿಯೋ ಅದಾಗಿದೆ. ಮೂಲತಃ ಟ್ವೀಟ್ ಮಾಡಿದ ವ್ಯಕ್ತಿ ‘ಐಕಾನಿಕ್ ಪೀಪಲ್ ಆನ್ ದ ಸ್ಟ್ರೀಟ್ಸ್, ಸಿಂಗಿಂಗ್ ಪಾರ್ಟಿ ಇನ್ ‌ದ ಯುಎಸ್‌ಎ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಭಾರತದ ಖ್ಯಾತ ಬಾಣಸಿಗ ವಿಕಾಸ ಖನ್ನಾ ಸದ್ಯ ನ್ಯೂಯಾರ್ಕ್‌ನಲ್ಲಿದ್ದು, ಅವರೂ ಅಲ್ಲಿನ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಜನ ಕಾರ್ ಹಾರ್ನ್‌ಗಳನ್ನು ಹಿನ್ನೆಲೆ ಗಾಯನವನ್ನಾಗಿ ಮಾಡಿಕೊಂಡು ಡಾನ್ಸ್ ಮಾಡುತ್ತಿದ್ದಾರೆ. ‘ನ್ಯೂಯಾರ್ಕ್ ಸಿಟಿಯಲ್ಲಿ ಹೊಸತನದ ಆರಂಭ’ ಎಂದು ಖನ್ನಾ ಕ್ಯಾಪ್ಶನ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...