alex Certify ಹೊಸ ವರ್ಷದ ಆರಂಭ ಯುಗಾದಿಯಂದು ಮೊದಲ ʼಬೇಸಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದ ಆರಂಭ ಯುಗಾದಿಯಂದು ಮೊದಲ ʼಬೇಸಾಯʼ

ಹೊಸ ವರ್ಷವೆಂದೇ ಕರೆಯಲಾಗುವ ಸಂಭ್ರಮದ ಯುಗಾದಿ ಇಂದು, ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲಾ ಹಬ್ಬದ ಆಚರಣೆ ವಿಶೇಷವಾಗಿರುತ್ತವೆ.

ರೈತರಿಗೆ ಬೇಸಿಗೆ ಎಂದರೆ ಬಿಡುವಿನ ದಿನ. ಇನ್ನು, ಊರಿನಿಂದ ಹೊರಗೆ ಹೋದವರೆಲ್ಲಾ ಹಬ್ಬಕ್ಕೆ ಊರಿಗೆ ಬರುತ್ತಾರೆ. ಮನೆ ಮಂದಿಯೆಲ್ಲ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಸ್ನೇಹಿತರೆಲ್ಲಾ ಸೇರಿ ಸಂಭ್ರಮಿಸುತ್ತಾರೆ.

ಎಣ್ಣೆ ಸ್ನಾನ, ಬೇವು ಬೆಲ್ಲ ಹಂಚುವುದು, ಹೊಸಬಟ್ಟೆ, ಚಂದ್ರನ ದರ್ಶನ, ಯುಗಾದಿಯ ಮರುದಿನ ವರ್ಷದ ತೊಡಕು ಇನ್ನೂ ಅನೇಕ ಆಚರಣೆಗಳು ಪ್ರಚಲಿತದಲ್ಲಿವೆ. ಕೆಲವು ಕಡೆಗಳಲ್ಲಿ ಯುಗಾದಿಯ ವೇಳೆ ಜೂಜಾಟ ಜೋರಾಗಿ ನಡೆಯುತ್ತದೆ.

ಯುಗಾದಿಯ ವೇಳೆ ಮರಗಿಡಗಳೆಲ್ಲಾ ಹಸಿರು ತುಂಬಿಕೊಂಡು ನಳನಳಿಸುತ್ತವೆ. ಯುಗಾದಿ ದಿನ ಮಾಡಿದ ಕೆಲಸಗಳು ಒಳಿತಾಗುತ್ತವೆ ಎಂಬ ನಂಬಿಕೆ ಇದೆ. ಕೆಲವು ಕಡೆ ರೈತರು ಯುಗಾದಿಯಂದು ಮೊದಲ ಬೇಸಾಯ ಮಾಡುತ್ತಾರೆ. ಹೊಲಕ್ಕೆ ಹೋಗಿ ಒಂದೆರಡು ಸುತ್ತು ಉಳುಮೆ ಮಾಡಿ ಮರಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...