alex Certify ಹಿಂದೂ ಹುಡುಗನನ್ನು ಪ್ರೀತಿಸಿದ್ದ ಪಾಕಿಸ್ತಾನದ ಮುಸ್ಲಿಂ ಹುಡುಗಿಗೆ ಕುಟುಂಬಸ್ಥರಿಂದಲೇ ದಿಗ್ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ಹುಡುಗನನ್ನು ಪ್ರೀತಿಸಿದ್ದ ಪಾಕಿಸ್ತಾನದ ಮುಸ್ಲಿಂ ಹುಡುಗಿಗೆ ಕುಟುಂಬಸ್ಥರಿಂದಲೇ ದಿಗ್ಬಂಧನ

ಹಿಂದೂ ಹುಡುಗನೊಬ್ಬನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಪಾಕಿಸ್ತಾನೀ ಮುಸ್ಲಿಂ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಬಂಧನದಲ್ಲಿ ಇಟ್ಟುಕೊಂಡಿದ್ದು, ಲವ್‌ ಮಾಡುವುದನ್ನು ಮುಂದುವರೆಸಿದರೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ.

ಇಟಲಿಯ ಅರರೆಜ್ಜೋ ಪ್ರದೇಶದ ಟಸ್ಕಾನ್‌ ಎಂಬ ಪಟ್ಟಣದಲ್ಲಿ ನಡೆದ ಈ ಘಟನೆಯಲ್ಲಿ; ಕೌಟುಂಬಿಕ ಬಂಧನದಲ್ಲಿದ್ದರೂ ಸಹ ಅದು ಹೇಗೋ ಮಾಡಿ ಪೊಲೀಸರಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ ಹುಡುಗಿ. ಪೊಲೀಸರು ಆ ಹುಡುಗಿಯನ್ನು ಕುಟುಂಬಸ್ಥರಿಂದ ಮುಕ್ತಳಾಗಿಸಿದ್ದು, ಹುಡುಗನೊಂದಿಗೆ ಸಂಪರ್ಕದಲ್ಲಿದ್ದಾರೆ.

ಹುಡುಗಿಯ ಮೊಬೈಲ್‌ ಅನ್ನು ಕಿತ್ತುಕೊಂಡಿರುವ ಕುಟುಂಬ ಅಗತ್ಯಬಿದ್ದಲ್ಲಿ ಮಾತ್ರವೇ ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಕುಟುಂಬದ ಇತರರೊಂದಿಗೆ ಬಿಡುತ್ತಿತ್ತು.

ʼಪಾನ್ʼ ಜೊತೆ ಇನ್ನೂ ಲಿಂಕ್ ಆಗಿಲ್ವಾ ಆಧಾರ್…? ಜೂನ್ 30 ರ ನಂತ್ರ ಕಟ್ಟಬೇಕು ದಂಡ

ತನ್ನ ಓದಿಗಾಗಿ ಇದ್ದ ಕಂಪ್ಯೂಟರ್‌ ಮೂಲಕ ಹುಡುಗಿ ಪೊಲೀಸರಿಗೆ ಇಮೇಲ್ ಕಳುಹಿಸಿದ್ದು, ಹುಡುಗನೊಂದಿಗೆ ಭೇಟಿಯಾಗುವುದನ್ನು ಮುಂದುವರೆಸಿದರೆ ಪಾಕಿಸ್ತಾನಕ್ಕೆ ಮರಳಿ ಕರೆದೊಯ್ಯುವುದಾಗಿ ತನ್ನ ಕುಟುಂಬ ಹೆದರಿಸುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ ಹುಡುಗಿ.

ಒಂದು ವರ್ಷದಿಂದ ಎಲ್ಲವೂ ಸಾಂಗವಾಗಿ ಹೋಗುತ್ತಿದ್ದ ಈ ಸಂಬಂಧದಲ್ಲಿ ಹುಡುಗನ ಧರ್ಮದ ಬಗ್ಗೆ ತಿಳಿಯುತ್ತಲೇ ತನ್ನ ಮನೆಯವರಿಗೆ ಅಸಹನೆ ಭುಗಿಲೆದ್ದಿದೆ ಎಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಹುಡುಗಿಯನ್ನು ರಕ್ಷಣಾ ಕೇಂದ್ರಕ್ಕೆ ಕರೆದೊಯ್ದಿದ್ದು, ಅಗತ್ಯಬಿದ್ದಲ್ಲಿ ಆಕೆಯ ಅಪ್ಪ ಮತ್ತು ಸಹೋದರರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...