alex Certify ಸಂರಕ್ಷಿತ ಪಕ್ಷಿ ಬೇಟೆಗೆ ಅವಕಾಶ ನೀಡಿ ವಿವಾದಕ್ಕೆ ಗುರಿಯಾದ ಪಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂರಕ್ಷಿತ ಪಕ್ಷಿ ಬೇಟೆಗೆ ಅವಕಾಶ ನೀಡಿ ವಿವಾದಕ್ಕೆ ಗುರಿಯಾದ ಪಾಕ್…!

2020-21ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂರಕ್ಷಿತ ಹೌಬಾರಾ ಬಸ್ಟರ್ಡ್​ಗಳನ್ನ ಬೇಟೆಯಾಡಲು ಸೌದಿಯ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್​ ಹಾಗೂ ಇತರ ಇಬ್ಬರು ರಾಜಮನೆತನದ ಸದಸ್ಯರಿಗೆ ವಿಶೇಷ ಪರವಾನಗಿ ನೀಡಿದೆ.

ಬಲೂಚಿಸ್ತಾನ ಹಾಗೂ ಪಂಜಾಬ್​ ಎಂಬ ಎರಡು ಪ್ರಾಂತ್ಯಗಳ ವಿವಿಧ ಪ್ರದೇಶಗಳಲ್ಲಿ ಬೇಟೆಯಾಡಲು ಅವಕಾಶ ನೀಡಲಾಗಿದೆ ಅಂತಾ ಡಾನ್​ ಪತ್ರಿಕೆ ವರದಿ ಮಾಡಿದೆ.

ಹೌಬರಾ ಬಸ್ಟರ್ಡ್​ ಜಾತಿಗೆ ಸೇರಿದ ಈ ಪಕ್ಷಿ ಮಧ್ಯ ಏಷ್ಯಾದ ತಂಪಾದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಪಾಕಿಸ್ತಾನದ ಬೆಚ್ಚಗಿನ ವಾತಾವರಣದಲ್ಲಿ ಚಳಿಗಾಲ ಕಳೆಯಲು ಪ್ರತಿವರ್ಷ ಇದು ದಕ್ಷಿಣ ದಿಕ್ಕಿಗೆ ವಲಸೆ ಹೋಗುತ್ತದೆ.

ಹೌಬರಾ ಸಂಖ್ಯೆ ಕ್ಷೀಣಿಸುತ್ತಿರೋದ್ರಿಂದ ವಿವಿಧ ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಪ್ಪಂದಗಳ ಅಡಿಯಲ್ಲಿ ಈ ಹಕ್ಕಿಯನ್ನ ರಕ್ಷಿಸಲಾಗಿದೆ. ಮಾತ್ರವಲ್ಲದೇ ಸ್ಥಳೀಯ ವನ್ಯಜೀವಿ ಕಾನೂನುಗಳ ಅಡಿಯಲ್ಲಿ ಈ ಪಕ್ಷಿಯನ್ನ ಬೇಟೆಯಾಡಲು ಪಾಕಿಸ್ತಾನಿಗಳಿಗೆ ಅವಕಾಶವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...