alex Certify ಬೇಸ್ ಬಾಲ್ ತುಂಬಿದ ಬಕೆಟ್ ಇಟ್ಟ ಅಜ್ಜ ನೀಡಿದ ಸಂದೇಶವೇನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸ್ ಬಾಲ್ ತುಂಬಿದ ಬಕೆಟ್ ಇಟ್ಟ ಅಜ್ಜ ನೀಡಿದ ಸಂದೇಶವೇನು..?

ಯುವಕನೊಬ್ಬ ಟ್ವಿಟ್ಟರ್ ನಲ್ಲಿ ಹಾಕಿದ ಫೋಟೋ ಹಾಗೂ ಸಂದೇಶ ನೆಟ್ಟಿಗರ ಗಮನ ಸೆಳೆದಿದೆ‌.‌ ಏಥನ್ ಅಂಡರ್ಸನ್ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಒಂದು ಫೋಟೋದಲ್ಲಿ ಬ್ಯಾಟಿಂಗ್ ಕೇಜ್ ನಡುವೆ ಬಕೆಟ್ ಒಂದಿದ್ದು, ಅದರ ತುಂಬ ಬೇಸ್ ಬಾಲ್ ಗಳಿವೆ‌. ಇನ್ನೊಂದರಲ್ಲಿ ಅದಕ್ಕೆ ಸಂಬಂಧಿಸಿದ ಸಂದೇಶ ಪತ್ರವಿದೆ.

ಅಂಡರ್ಸನ್ “ನನ್ನ ಅಜ್ಜ ಈ ಬಕೆಟ್ ಹಾಗೂ ಬಾಸ್ಕೆಟ್ ಬಾಲ್ ಬಿಟ್ಟು ಹೋಗಿದ್ದಾರೆ. ಇದನ್ನು ಯಾರು ಬೇಕಾದರೂ ಉಚಿತವಾಗಿ ಬಳಸಬಹುದು. ನಾನು ಅಳುತ್ತಿಲ್ಲ‌. ನೀನು ಅಳುತ್ತಿರುವೆ” ಎಂದು ಎರಡು ಫೋಟೋಗಳ ಜತೆ ಟ್ವೀಟ್ ಮಾಡಿದ್ದಾನೆ‌‌.‌

ಎರಡನೇ ಫೋಟೋದಲ್ಲಿ ಅಜ್ಜ ಬರೆದ ಸಂದೇಶವಿದ್ದು,‌ ಅದರಲ್ಲಿ, “ನಾನು ಮನೆಯ ಗ್ಯಾರೇಜ್ ಸ್ವಚ್ಛ ಮಾಡುವಾಗ ಈ ಬೇಸ್ ಬಾಲ್ ತುಂಬಿದ ಬಕೆಟ್ ಸಿಕ್ಕಿತು.‌ ನಾನು ಇದರಿಂದ ನನ್ನ ಮಗ ಹಾಗೂ ಮೊಮ್ಮಗನೊಟ್ಟಿಗೆ ಸಾಕಷ್ಟು ಬಾರಿ ಆಟವಾಡಿದ್ದೇನೆ. ಈಗ ನನಗೆ 72, ಮಗನಿಗೆ 46, ಮೊಮ್ಮಗನಿಗೆ 23 ವರ್ಷವಾಗಿದೆ. ನೀವೂ ಇದನ್ನು ಆಡಬಹುದು” ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...