alex Certify ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…!

ಅಮೆರಿಕಾದ ಓಹಿಯೋದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಮಹಿಳೆಯೊಬ್ಬಳ ಅದೃಷ್ಟ ಬದಲಿಸಿದೆ. 22 ವರ್ಷದ ಮಹಿಳೆ ಸರ್ಕಾರದ ಲಾಟರಿ ಖರೀದಿ ಮಾಡಿದ್ದಳು. ಕೊರೊನಾ ಲಸಿಕೆ ಪ್ರಚಾರಕ್ಕೆ ಅಲ್ಲಿನ ಸರ್ಕಾರ ಲಾಟರಿ ಶುರು ಮಾಡಿದೆ. ಮೊದಲ ಡೋಸ್ ಪಡೆದ ನಂತ್ರ ಮಹಿಳೆ ಲಾಟರಿ ಖರೀದಿ ಮಾಡಿದ್ದಳಂತೆ. ಇದ್ರಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.

ಈ ಲಾಟರಿಯಲ್ಲಿ ಮೊದಲ ಸ್ಥಾನ ಪಡೆದ 22 ವರ್ಷದ ಮಹಿಳೆಗೆ ಏಳುವರೆ ಕೋಟಿ ರೂಪಾಯಿ ಸಿಗಲಿದೆ ಎಂದು ಅಲ್ಲಿನ ಗವರ್ನರ್ ಹೇಳಿದ್ದಾರೆ. Abbigail Bugenske ಹೆಸರಿನ ಮಹಿಳೆ ಲಾಟರಿ ಗೆದ್ದಿದ್ದು, ಇದನ್ನು ನಂಬಲು ಸಾಧ್ಯವಾಗ್ತಿಲ್ಲವೆಂದಿದ್ದಾಳೆ. ಲಾಟರಿಯಲ್ಲಿ ಹಣ ಬರುವ ಮೊದಲು ಆಕೆ ಹಳೆ ಕಾರು ಖರೀದಿಸುವ ಪ್ಲಾನ್ ಮಾಡಿದ್ದಳಂತೆ. ಆದ್ರೆ ಈಗ ಹೊಸ ಕಾರ್ ಖರೀದಿ ಮಾಡುವ ತಯಾರಿ ನಡೆಸಿದ್ದಾಳೆ.

ಇಷ್ಟೇ ಅಲ್ಲದೆ 14 ವರ್ಷದ ಹುಡುಗನಿಗೆ ಸ್ಕಾಲರ್ ಶಿಪ್ ಸಿಕ್ಕಿದೆ. ಆತನ ವಿದ್ಯಾಭ್ಯಾಸ ಮುಗಿಯುವವರೆಗೂ ಈ ಸ್ಕಾಲರ್ ಶಿಪ್ ಆತನಿಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...