alex Certify ಕೊರೊನಾ ಆತಂಕದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್: ದಿನೇ ದಿನೇ ದುರ್ಬಲವಾಗುತ್ತಿದೆ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಆತಂಕದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್: ದಿನೇ ದಿನೇ ದುರ್ಬಲವಾಗುತ್ತಿದೆ ವೈರಸ್

ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ವೈರಸ್ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇನ್ನು ಮುಂದೆ ಅದ್ರ ಅಬ್ಬರ ಕಡಿಮೆಯಾಗಲಿದೆ ಎಂದು ಇಟಲಿಯ ಉನ್ನತ ವೈದ್ಯರು ಹೇಳಿದ್ದಾರೆ.

ಕೊರೊನಾ ವೈರಸ್ ಈಗ ದುರ್ಬಲಗೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಜಿನೋವಾದ ಸ್ಯಾನ್ ಮಾರ್ಟಿನೊ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾಕ್ಟರ್ ಮ್ಯಾಟಿಯೊ ಬಸೆಟ್ಟಿ ಈ ಮಾಹಿತಿಯನ್ನು ಸುದ್ದಿ ಸಂಸ್ಥೆ ಎಎನ್‌ಎಸ್‌ಎಗೆ ನೀಡಿದ್ದಾರೆ. ಈ ವೈರಸ್ ಎರಡು ತಿಂಗಳ ಹಿಂದೆ ಇದ್ದ ಸಾಮರ್ಥ್ಯವನ್ನು ಹೊಂದಿಲ್ಲ. ಸ್ಪಷ್ಟವಾಗಿ ಈ ಸಮಯದ COVID-19 ವೈರಸ್ ಭಿನ್ನವಾಗಿದೆ ಎಂದಿದ್ದಾರೆ.

ಕಳೆದ 10 ದಿನಗಳಲ್ಲಿ ತೆಗೆದ ಸ್ವ್ಯಾಬ್ ಮಾದರಿಗಳು ಇದನ್ನು ಸ್ಪಷ್ಟಪಡಿಸಿದೆ. ವೈರಲ್ ಲೋಡ್ ಪ್ರಮಾಣವು ಒಂದು ಅಥವಾ ಎರಡು ತಿಂಗಳ ಹಿಂದೆ ಇದ್ದಕ್ಕಿಂತ ಈಗ ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಕೊರೊನಾ ವೈರಸ್‌ನಿಂದ ಹೆಚ್ಚು ಪ್ರಭಾವಿತವಾದ ದೇಶಗಳಲ್ಲಿ ಇಟಲಿ ಒಂದು. ಕೊರೊನಾ ಸಾವಿನ ವಿಷ್ಯದಲ್ಲಿ ಇಟಲಿ ಮೂರನೇ ಸ್ಥಾನದಲ್ಲಿದೆ. ಮೇ ತಿಂಗಳಲ್ಲಿ ಹೊಸ ಸೋಂಕುಗಳು ಮತ್ತು ಸಾವುಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...