alex Certify ನಮೀಬಿಯಾದಲ್ಲಿ ಚುನಾವಣೆ ಗೆದ್ದ ಅಡಾಲ್ಫ್​ ಹಿಟ್ಲರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮೀಬಿಯಾದಲ್ಲಿ ಚುನಾವಣೆ ಗೆದ್ದ ಅಡಾಲ್ಫ್​ ಹಿಟ್ಲರ್​..!

ಹಿಟ್ಲರ್​ ಸರ್ವಾಧಿಕಾರತ್ವದ ಬಗ್ಗೆ ಇತಿಹಾಸದ ಪುಟಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ನಮೀಬಿಯಾದ ಚುನಾವಣೆಯಲ್ಲಿ ಜರ್ಮನ್​ ಸರ್ವಾಧಿಕಾರಿ ಅಡಾಲ್ಪ್​ ಹಿಟ್ಲರ್​ ಎಂಬ ಹೆಸರಿನ ರಾಜಕಾರಣಿ ಗೆಲುವನ್ನ ಕಂಡಿದ್ದಾರೆ.

ಅಡಾಲ್ಫ್​ ಹಿಟ್ಲರ್​ ಯುನೊನಾ ಹಿಂದಿನ ಜರ್ಮನ್​ ವಸಾಹತು ಪ್ರದೇಶದಲ್ಲಿ ಶೇಕಡಾ 85ರಷ್ಟು ಮತಗಳಿಸುವಲ್ಲಿ ಯಶಸ್ವಿಯಾದ್ರು. ಈ ಪ್ರದೇಶದಲ್ಲಿ ಜರ್ಮನ್​ ಭಾಷೆ ಮಾತನಾಡುವವರ ಸಂಖ್ಯೆ ತುಂಬಾನೆ ಕಡಿಮೆ ಇದೆ.

ಈ ರಾಜಕಾರಣಿಗೆ ಹಿಟ್ಲರ್ ಎಂದು ನಾಮಕರಣ ಮಾಡಿದ್ದು ಇವರ ತಂದೆಯಂತೆ. ಅಡಾಲ್ಫ್​​ ಹಿಟ್ಲರ್​ ಸಿದ್ಧಾಂತಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿರದ ನನ್ನ ತಂದೆ ನನಗೆ ಈ ಹೆಸರನ್ನ ಇಟ್ಟಿದ್ರು. ಬಾಲ್ಯದಲ್ಲಿ ನನಗೆ ಈ ಹೆಸರಿನ ಹಿಂದಿನ ಯಾವುದೇ ಕತೆಗಳು ಗೊತ್ತಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಹಿಟ್ಲರ್​ ಹೆಸರಿನ ಬಗ್ಗೆ ತಿಳಿದುಕೊಂಡೆ ಅಂತಾ ರಾಜಕಾರಣಿ ಹಿಟ್ಲರ್​ ಹೇಳಿದ್ರು. ಅಂದಹಾಗೆ ನಮೀಬಿಯಾದ ರಾಜಕಾರಣಿಯ ಹೆಂಡತಿ ಇವರನ್ನ ಅಡಾಲ್ಫ್​ ಎಂದು ಕರೆಯುತ್ತಾರಂತೆ.

— Eagle FM Namibia (@EagleFMNam) November 26, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...