alex Certify ವಿದೇಶದಲ್ಲಿ ʼಉನ್ನತ ವ್ಯಾಸಂಗʼ ಮಾಡಲು ಇಚ್ಛಿಸುತ್ತಿದ್ದೀರಾ..? ನಿಮ್ಮನ್ನು ಸ್ವಾಗತಿಸುತ್ತಿದೆ ಈ ದೇಶ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ ʼಉನ್ನತ ವ್ಯಾಸಂಗʼ ಮಾಡಲು ಇಚ್ಛಿಸುತ್ತಿದ್ದೀರಾ..? ನಿಮ್ಮನ್ನು ಸ್ವಾಗತಿಸುತ್ತಿದೆ ಈ ದೇಶ..!

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದುಕೊಂಡವರಿಗೆ ಆಸ್ಟ್ರಿಯಾದಲ್ಲಿ ಉತ್ತಮ ಅವಕಾಶವಿದೆ. ಆಸ್ಟ್ರಿಯಾದಲ್ಲಿ ತಮ್ಮ ಅಧ್ಯಯನ ಮುಂದುವರಿಸಬೇಕು ಎಂದುಕೊಂಡವರಿಗೆ ಆಸ್ಟ್ರಿಯಾ ದೇಶವು ಉತ್ತಮ ಸಾಂಸ್ಕ್ರತಿಕ ಶ್ರೀಮಂತಿಕೆ ಹಾಗೂ ವೈವಿಧ್ಯತೆಯನ್ನು ಒದಗಿಸುತ್ತದೆ. ಅಲ್ಲದೇ ವಿದೇಶಿದಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮ ಸಾಮಾಜಿಕ ಅನುಭವ ನೀಡುತ್ತೇವೆ ಎಂದು ಆಸ್ಟ್ರಿಯಾ ಹೇಳಿದೆ.

ವೀಸಾ ಇಲ್ಲದೆಯೇ ನೀವು ಆಸ್ಟ್ರಿಯಾ ದೇಶಕ್ಕೆ ಪ್ರವೇಶವನ್ನು ಪಡೆಯಬಹುದಾಗಿದೆ. ವೀಸಾ ಇಲ್ಲದೇ ಆಸ್ಟ್ರಿಯಾಗೆ ಪ್ರವೇಶಿಸಲು ಅನುಮತಿ ಪಡೆದ ವಿದ್ಯಾರ್ಥಿಗಳು ಒಮ್ಮೆ ನಿವಾಸ ಪ್ರಾಧಿಕಾರದಿಂದ ನಿವಾಸ ಪರವಾನಿಗೆಗೆ ಅರ್ಜಿ ಸಲ್ಲಿಕೆ ಮಾಡಿ ಲೈಸೆನ್ಸ್​ ಪಡೆದುಕೊಳ್ಳಬಹುದಾಗಿದೆ.

EU/EEA ಪ್ರಜೆಗಳಿಗೆ ವೀಸಾ ಅಥವಾ ನಿವಾಸ ಶೀರ್ಷಿಕೆ ಅಗತ್ಯವಿಲ್ಲ. ಆದಾಗ್ಯೂ, ಅವರು ಆಸ್ಟ್ರಿಯಾವನ್ನು ಪ್ರವೇಶಿಸಿದ ಮೂರು ತಿಂಗಳೊಳಗೆ ನಿವಾಸದ ಉಸ್ತುವಾರಿ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು.

ಇತರೆ ದೇಶದ ಪ್ರಜೆಗಳು ವಿಸಾ ಸಿ ಮೂಲಕ ಗರಿಷ್ಠ 90 ದಿನ ಅಥವಾ ವೀಸಾ ಡಿ ಮೂಲಕ 91 ದಿನಗಳಿಂದ ಗರಿಷ್ಠ ಆರು ತಿಂಗಳುಗಳ ಕಾಲ ಅಥವಾ ಅಧ್ಯಯನ ನಿವಾಸ ಪರವಾನಿಗೆ ಪಡೆದು ಆರು ತಿಂಗಳಿಗೂ ಅಧಿಕ ಕಾಲ ಉಳಿದುಕೊಳ್ಳಬಹುದಾಗಿದೆ.

ನಿವಾಸ ಪರವಾನಿಗೆ ಹೊಂದಿರುವ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್​ಗೆ 726.72 ಯುರೋಗಳನ್ನು ಪಾವತಿಸಬೇಕು. ವಿದ್ಯಾರ್ಥಿ ಸಂಘದ ಸದಸ್ಯತ್ವ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ವಿದ್ಯಾರ್ಥಿ ಸಂಘದ ಸದಸ್ಯತ್ವ ಹಾಗೂ ವಿದ್ಯಾರ್ಥಿ ಅಪಘಾತ ವಿಮೆ ಶುಲ್ಕ, ವಿಮೆ ಶುಲ್ಕವು ಪ್ರತಿ ಸೆಮಿಸ್ಟರ್​ಗೆ 20 ಯುರೋ ಇರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಶುಲ್ಕ ಕಡ್ಡಾಯವಾಗಿದೆ.

EU/EEA ಅಲ್ಲದ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣಪತ್ರ, ರಾಷ್ಟ್ರೀಯತೆಯ ಪುರಾವೆ, ಸಮಾನ ಮಾಧ್ಯಮಿಕ ಶಾಲಾ ವರ್ಗಾವಣೆ ಪ್ರಮಾಣಪತ್ರ, ಜರ್ಮನ್ ಭಾಷಾ ಪ್ರಾವೀಣ್ಯತೆ ಕನಿಷ್ಠ 4 ವರ್ಷಗಳ ಜರ್ಮನ್ ಪಾಠಗಳನ್ನು ದೃಢೀಕರಿಸುವ ಮಾಧ್ಯಮಿಕ ಶಾಲೆಯಿಂದ ವರ್ಗಾವಣೆ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯವಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...