alex Certify ಕುತೂಹಲಕ್ಕೆ ಕಾರಣವಾಗಿದೆ ಗುಹೆಯಲ್ಲಿರುವ ಕೊಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಗುಹೆಯಲ್ಲಿರುವ ಕೊಳ…!

ಅಮೆರಿಕಾದ ನ್ಯೂ ಮೆಕ್ಸಿಕೋದ ಗುಹೆಯೊಂದರಲ್ಲಿ ಅಪರೂಪದ ಕೊಳವೊಂದು ರಚನೆಯಾಗಿದೆ. ಈ ಗುಹೆಯ ಮಾನವ ಸಂಪರ್ಕವೇ ಇಲ್ಲದ ಸ್ಥಳದಲ್ಲಿ ಇದು ರಚನೆಯಾಗಿದೆ ಎಂದು ಪಾರ್ಕ್ ಆಡಳಿತ ಮಂಡಳಿ ತನ್ನ ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದೆ.

“ಕೊಳದ ಅಂಚು ಹಾಗೂ ಕೆಳಗೆ ಬೆರಳುಗಳಾಕಾರವಿದೆ” ಎಂದು ಬರೆಯಲಾಗಿದೆ. ಇದು ಬ್ಯಾಕ್ಟೀರಿಯಾಗಳ ಶೇಖರಣೆಯಿಂದ ಆಗಿರಬಹುದು ಎಂದು ಅಂದಾಜಿಸಲಾಗಿದೆ.

1993 ರಲ್ಲಿ ಇದನ್ನು ಮೊದಲು ಗುರುತಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಮಾನವ ಸಂಪರ್ಕವೇ ಇಲ್ಲದೆ, ಯಾವುದೇ ಮಾಲಿನ್ಯ ಉಂಟಾಗದಂತೆ ಕಾಪಾಡಿಕೊಂಡು ಬರಲಾಗಿದೆ.

ಎರಡು ಅಡಿ ಉದ್ದ ಒಂದು ಅಡಿ ಅಗಲವಿರುವ ಕೊಳವು ನೀಲಿ ಬಣ್ಣದ ನೀರನ್ನು ಹೊಂದಿದ್ದು, ಸುತ್ತಲು ಬಿಳಿಯ ಶಿಲೆಯಾಕಾರದ ದಂಡೆಯನ್ನು ಹೊಂದಿದೆ ಎಂದು ಪಾರ್ಕ್ ನ ಆಡಳಿತ ವಿವರಿಸಿದೆ.

ಈ ಫೇಸ್ಬುಕ್ ಪೋಸ್ಟ್ ಅನ್ನು 1500ಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, ಇನ್ನಷ್ಟು ಫೋಟೊಗಳನ್ನು ಹಂಚಿಕೊಳ್ಳಿ, ಇದರ ಕುರಿತು ಇನ್ನಷ್ಟು ತಿಳಿಸಿ ಎಂದು ನೆಟ್ಟಿಗರು ಕೇಳಿಕೊಂಡಿದ್ದಾರೆ.

Exploration in caves sometimes yields wondrous sights. This cave pool, found in Lechuguilla Cave, appears to be…

Posted by Carlsbad Caverns National Park on Sunday, May 31, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...