alex Certify ಮುಂಬೈನ ಕನ್ಹೇರಿ ಗುಹೆಗಳ ಸೊಬಗಿಗೆ ಬೆರಗಾಗದವರಾರು……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನ ಕನ್ಹೇರಿ ಗುಹೆಗಳ ಸೊಬಗಿಗೆ ಬೆರಗಾಗದವರಾರು……?

mumbai attractions: ಕನ್ಹೇರಿ ಗುಹೆಯೊಳಗೆ ಹೋಗೋದೇ ...

ನೀವು ಚಾರಣ ಪ್ರಿಯರಾಗಿದ್ದರೆ ಮುಂಬೈನ ಕನ್ಹೇರಿ ಗುಹೆಗಳ ಸೊಬಗನ್ನು ಒಮ್ಮೆ ಕಣ್ತುಂಬಿಸಿಕೊಳ್ಳಲೇಬೇಕು. ಅಷ್ಟು ಸೊಗಸಾಗಿದೆ ಇಲ್ಲಿಯ ಸೌಂದರ್ಯ. ಈ ಗುಹೆಗಳು ಮತ್ತು ವರ್ಣಚಿತ್ರಗಳು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಮೇಲೆ ಬೌದ್ಧ ಪ್ರಭಾವವನ್ನು ಹೇಳುತ್ತದೆ.

ಗುಹೆಗಳು ತಮ್ಮ 109 ವಿಶೇಷ ಪ್ರವೇಶ ದ್ವಾರಗಳಿಗೆ ಹೆಸರು ಪಡೆದಿವೆ. ಹೆಚ್ಚಿನ ಗುಹೆಗಳು ಹಿಂದೆ ವಾಸಿಸಲು, ಅಧ್ಯಯನಕ್ಕೆ ಮತ್ತು ಧ್ಯಾನ ಮಾಡುತ್ತಿದ್ದ ತಾಣಗಳಾಗಿದ್ದವು. ಈ ಗುಹೆಗಳು ಕ್ರಿ.ಶ ಒಂದರಿಂದ ಹತ್ತನೆಯ ಶತಮಾನದ ಕಾಲಘಟ್ಟದಲ್ಲಿ ನಿರ್ಮಾಣವಾದವು ಎನ್ನಲಾಗಿದೆ. ಇಲ್ಲಿರುವ ಹಳೆ ಗುಹೆಗಳು ಸರಳ ವಿನ್ಯಾಸದಿಂದ ಇದ್ದರೆ ಹೊಸ ಗುಹೆಗಳು ಅಲಂಕಾರಿಕವಾಗಿವೆ.

ಕನ್ಹೇರಿಯಲ್ಲಿ ಸುಮಾರು 51 ಶಾಸನಗಳು ಮತ್ತು 26 ಶಿಲಾ ಶಾಸನಗಳಿವೆ. ಈ ತಾಣ ಸಾಹಸ ಕ್ರೀಡೆಗೆ ಜನಪ್ರಿಯವಾಗಿದೆ.
ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಿಂದ ಎರಡು ಗಂಟೆಯ ಚಾರಣದ ಮೂಲಕ ಇಲ್ಲಿಗೆ ತಲುಪಬಹುದು. ಹಸಿರು ಕಾಡಿನ ಜೊತೆ ಜಲಪಾತಗಳನ್ನೂ ಸಮೀಪದಿಂದ ಕಣ್ತುಂಬಿಸಿಕೊಳ್ಳುವ ಅವಕಾಶ ಸಿಗುತ್ತದೆ. ವಾರಾಂತ್ಯದ ಪ್ರವಾಸಕ್ಕೆ ಇದು ಅತ್ಯುತ್ತಮ ತಾಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...