alex Certify ಮುಂದುವರೆದ ಶೂಟೌಟ್ ಪ್ರಕರಣ: ನ್ಯೂ ಮೆಕ್ಸಿಕೋದಲ್ಲಿ ಗುಂಡಿನ ದಾಳಿಯಲ್ಲಿ ಮೂವರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದುವರೆದ ಶೂಟೌಟ್ ಪ್ರಕರಣ: ನ್ಯೂ ಮೆಕ್ಸಿಕೋದಲ್ಲಿ ಗುಂಡಿನ ದಾಳಿಯಲ್ಲಿ ಮೂವರ ಸಾವು

ಅಮೆರಿಕದಲ್ಲಿ ಫೋಟೋ ಪ್ರಕರಣಗಳು ಮುಂದುವರೆದಿದ್ದು, 18 ವರ್ಷದ ಯುವಕನಿಂದ ನಡೆದ ಫೈರಿಂಗ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ನ್ಯೂ ಮೆಕ್ಸಿಕೋದ ಫಾರ್ಮಿಂಗ್ಟನ್ ನಲ್ಲಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ನ್ಯೂ ಮೆಕ್ಸಿಕೋದ ಫೋರ್ ಕಾರ್ನರ್ಸ್ ಪ್ರದೇಶದಲ್ಲಿ ಗುಂಡಿನ ದಾಳಿಯಲ್ಲಿ ಶಂಕಿತ ವ್ಯಕ್ತಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೋಮವಾರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ವ್ಯಕ್ತಿ 18 ವರ್ಷ ವಯಸ್ಸಿನವನಾಗಿದ್ದು, ಆತನ ಬಳಿ ಹಲವು ಶಸ್ತ್ರಾಸ್ತ್ರಗಳಿವೆ ಎಂದು ಉಪ ಪೊಲೀಸ್ ಮುಖ್ಯಸ್ಥ ಬಾರಿಕ್ ಕ್ರಮ್ ಹೇಳಿದ್ದಾರೆ.

ಫಾರ್ಮಿಂಗ್ಟನ್ ಪೊಲೀಸ್ ಅಧಿಕಾರಿ ಮತ್ತು ರಾಜ್ಯ ಪೊಲೀಸ್ ಸದಸ್ಯ ಕೂಡ ಗಾಯಗೊಂಡಿದ್ದಾರೆ ಎಂದು ಫಾರ್ಮಿಂಗ್ಟನ್ ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...