alex Certify ಹಾವುಗಳನ್ನು ರಕ್ಷಿಸಿ ಮಕ್ಕಳಂತೆ ಸಾಕುತ್ತಿರುವ ಬೌದ್ಧ ಭಿಕ್ಷು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವುಗಳನ್ನು ರಕ್ಷಿಸಿ ಮಕ್ಕಳಂತೆ ಸಾಕುತ್ತಿರುವ ಬೌದ್ಧ ಭಿಕ್ಷು

Myanmar monk creates refuge for snakes ranging from pythons to cobras at monastery - it s viral - Hindustan Times

ಮ್ಯಾನ್ಮಾರ್‌ನ ಯಾಂಗನ್ ಪಟ್ಟಣದಲ್ಲಿರುವ 69 ವರ್ಷದ ಬೌದ್ಧ ಭಿಕ್ಷುವೊಬ್ಬರು ತಮ್ಮ ಸೈಕ್ತಾ ಥುಕಾ ಮೊನಾಸ್ಟ್ರಿಯನ್ನು ಹಾವುಗಳಿಗೆ ಆಶ್ರಯ ಕೊಡುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ.

ಕಾಳ ಸಂತೆಯಲ್ಲಿ ಮಾರಾಟವಾಗಿ ಮಾಂಸ ದಂಧೆಗೆ ಪ್ರಾಣ ಕೊಡಬೇಕಿದ್ದ ಈ ಹಾವುಗಳನ್ನು ವಿಲಾತಾ ಹೆಸರಿನ ಈ ಭಿಕ್ಷುವೊಬ್ಬರು ತಂದು ರಕ್ಷಿಸಿ ಆಶ್ರಯ ಕೊಟ್ಟಿದ್ದಾರೆ. ಹೆಬ್ಬಾವುಗಳು, ಮಂಡಲದ ಹಾವುಗಳು ಹಾಗೂ ನಾಗರಹಾವುಗಳಿಗೆ ಈ ಭಿಕ್ಷು ಆಶ್ರಯ ಕೊಟ್ಟಿದ್ದಾರೆ.

ಈ ಹಾವುಗಳು ಖುದ್ದು ತನ್ನ ಮಕ್ಕಳ ಸಮಾನ ಎಂದು ಹೇಳಿಕೊಳ್ಳುವ ಈ ಭಿಕ್ಷು, ಅವುಗಳನ್ನು ಭಾರೀ ಆಸ್ಥೆಯಿಂದ ಪೋಷಿಸುತ್ತಿದ್ದಾರೆ. ಹಾವುಗಳನ್ನು ಕೊಲೆಗಾರರಿಗೆ ಮಾರುವುದಕ್ಕಿಂತ ಈ ಭಿಕ್ಷುಗೆ ಕೊಟ್ಟು ಪುಣ್ಯ ಪಡೆದುಕೊಳ್ಳುವುದು ಉತ್ತಮ ಎಂದು ಇಲ್ಲಿನ ಜನರ ಭಾವಿಸಿದ್ದಾರೆ. ಈ ಮೂಲಕ ಪರಿಸರ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತಿರುವುದಾಗಿ ಈ ಭಿಕ್ಷು ತಿಳಿಸಿದ್ದಾರೆ.

ನೆರೆಯ ಚೀನಾ ಹಾಗೂ ಥಾಯ್ಲೆಂಢ್‌ಗೆ ಈ ಹಾವುಗಳ ಕಳ್ಳಸಾಗಾಟವಾಗುತ್ತಿದೆ ಎಂದು ಪ್ರಾಣಿ ಸಂರಕ್ಷಣಾ ತಜ್ಞರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...