alex Certify ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳ ಪ್ರಚಾರಕ್ಕೆ ಅವಕಾಶ ನೀಡಿದ ಬರ್ಗರ್ ಕಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳ ಪ್ರಚಾರಕ್ಕೆ ಅವಕಾಶ ನೀಡಿದ ಬರ್ಗರ್ ಕಿಂಗ್

ಲಂಡನ್: ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಬರ್ಗರ್ ಕಂಪನಿ ಬರ್ಗರ್ ಕಿಂಗ್ ಸ್ಥಳೀಯ ರೆಸ್ಟೋರೆಂಟ್ ಗಳಿಗೆ ಉಚಿತ ಪ್ರಚಾರದ ಅವಕಾಶ ಮಾಡಿಕೊಟ್ಟಿದೆ.

ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ರೆಸ್ಟೋರೆಂಟ್ ಗಳು ತಮ್ಮ ತಿಂಡಿಯ ಫೋಟೋ ಹಾಗೂ ಮಾಹಿತಿಯನ್ನು ಹಾಕುವಂತೆ ಕರೆ ನೀಡಿದೆ. ಕೊರೊನಾ ಲಾಕ್ ಡೌನ್ ಕಾರಣದಿಂದ ಬಂದಾಗಿ ಗ್ರಾಹಕರನ್ನು ಕಳೆದುಕೊಂಡ ಹೋಟೆಲ್ ಗಳಿಗೆ ದೇಶದಾದ್ಯಂತ ಪ್ರಚಾರದ ಅವಶ್ಯಕತೆ ಇದೆ ಎಂದು ಬರ್ಗರ್ ಕಿಂಗ್ ಅಭಿಪ್ರಾಯಪಟ್ಟಿದೆ. ಕಂಪನಿಯ ಈ ಕಾರ್ಯಕ್ಕೆ ಜಾಲತಾಣಗಳಲ್ಲಿ ತುಂಬಾ ಮೆಚ್ಚುಗೆ ಸಿಕ್ಕಿದೆ.‌

“ದೆರ್ ಈಸ್ ಮೋರ್ ಟು ಲೈಫ್ ದೆನ್ ದ ಹೋಪರ್, ರೋಟಿ ಕಿಂಗ್, ಸುಲ್ತಾನ್ಸ್ ಪ್ಯಾಲೇಸ್ ತಯಾಬ್ಸ್ ಇಕೊ ಇಂಥ ಸಾವಿರಾರು ತಿನಿಸುಗಳು ಪ್ರಚಾರಕ್ಕೆ ಅರ್ಹವಾಗಿವೆ ಎಂದು ಬರ್ಗರ್ ಕಿಂಗ್ ಬರೆದಿದೆ. ಕಳೆದ ನವೆಂಬರ್ ನಲ್ಲಿ ಬರ್ಗರ್ ಕಿಂಗ್ ಇತರ ಕಂಪನಿಗಳಲ್ಲೂ ಆಹಾರ ಖರೀದಿಸಿ ಎಂದು ಬರೆದು ಅಚ್ಚರಿ ಮೂಡಿಸಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...