alex Certify ಬಾಲಕಿಗೆ ಸ್ವಂತ ಹಣದಿಂದ ಬರ್ಗರ್ ನೀಡಿದ ಉದ್ಯೋಗಿ…! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಗೆ ಸ್ವಂತ ಹಣದಿಂದ ಬರ್ಗರ್ ನೀಡಿದ ಉದ್ಯೋಗಿ…! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ನೋಯ್ಡಾ (ಉತ್ತರ ಪ್ರದೇಶ): 10 ರೂಪಾಯಿ ಹಿಡಿದು 90 ರೂಪಾಯಿಗಳ ಬರ್ಗರ್​ ತಿನ್ನಲು ಅಂಗಡಿಗೆ ಬಂದಿದ್ದ ಪುಟ್ಟ ಬಾಲೆಯೊಬ್ಬಳಿಗೆ ಬರ್ಗರ್​ ನೀಡಿ ಔದಾರ್ಯ ಮರೆದ ಬರ್ಗರ್ ಕಿಂಗ್‌ನ ನೋಯ್ಡಾದ ಉದ್ಯೋಗಿಯೊಬ್ಬನಿಗೆ ಬರ್ಗರ್​ ಕಿಂಗ್​ ಸನ್ಮಾನಿಸಿದೆ.

ಪುಟ್ಟ ಹುಡುಗಿಯೊಬ್ಬಳು 10 ರೂಪಾಯಿ ಹಿಡಿದುಕೊಂಡು ತನಗೆ ಬರ್ಗರ್​ ಬೇಕು ಎಂದು ಕೇಳಿದ್ದಳು. ಆದರೆ ಉದ್ಯೋಗಿ ಧೀರಜ್​ ಶರ್ಮಾ, ಆಕೆಯನ್ನು ನೋಡಿ ಬರ್ಗರ್​ ನೀಡಲಾಗದು ಎನ್ನದೇ ತಮ್ಮ ಜೇಬಿನಿಂದ 80 ರೂಪಾಯಿಗಳನ್ನು ಪಾವತಿಸಿ ಬಾಲಕಿಗೆ 90 ರೂಪಾಯಿಗಳ ಬರ್ಗರ್​ ನೀಡಿದ್ದರು. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಉದ್ಯೋಗಿಯ ಔದಾರ್ಯವನ್ನು ಮೆಚ್ಚಿ ಈ ಸನ್ಮಾನ ಮಾಡಲಾಗಿದೆ. ಈ ಕುರಿತು ಬರ್ಗರ್​ ಕಿಂಗ್​ ಟ್ವಿಟರ್​ ಖಾತೆಯಲ್ಲಿ ಸನ್ಮಾನದ ಫೋಟೋ ಶೇರ್​ ಮಾಡಿಕೊಂಡು ವಿಷಯವನ್ನು ತಿಳಿಸಿದೆ. ಉದ್ಯೋಗಿಯ ಔದಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...