alex Certify ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಇದೊಂದು ಶಾಕಿಂಗ್ ವಿಡಿಯೋ. ಮಂಗವೊಂದು ಪುಟ್ಟ ಮಗುವನ್ನು ರಸ್ತೆಯಲ್ಲಿ ದರ ದರನೆ ಎಳೆದೊಯ್ಯುವ ಸನ್ನಿವೇಶವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಆ ಸನ್ನಿವೇಶ ನೋಡಿದರೆ ಅದೊಂದು ತರಬೇತಿ ಪಡೆದ ಮಂಗ ಎನಿಸುತ್ತದೆ. ಪುಟ್ಟ ಮಕ್ಕಳ ಆಟಿಕೆ ಸೈಕಲ್ ಏರಿ ಅಚ್ಚರಿ ರೀತಿಯಲ್ಲಿ ಅಗಮಿಸುತ್ತದೆ,

ಆದರೆ, ಅದು ಏಕಾಏಕಿ ಸೈಕಲನ್ನು ಬಿಟ್ಟು ಮಂಗನ ಚೇಷ್ಟೆಯನ್ನು ನೋಡಿ ಸಂಭ್ರಮಿಸುತ್ತಿದ್ದ ಮಕ್ಕಳ ಪೈಕಿ ಒಂದು ಪುಟ್ಟ ಮಗುವನ್ನು ದರ ದರನೆ ಎಳೆದುಕೊಂಡು ಹೋಗುತ್ತದೆ. ಕೆಲ ದೂರ ಎಳೆಯುವಾಗ ಅಲ್ಲಿದ್ದರೆಲ್ಲ ಕೂಗುತ್ತಿದ್ದಂತೆ ಅದು ಮಗುವನ್ನು ಬಿಟ್ಟುಬಿಡುತ್ತದೆ. ಪುನಃ ಮಗು ತಾನು ಮುಂಚಿದ್ದ ಜಾಗದತ್ತ ಹೆಜ್ಜೆ ಹಾಕುತ್ತದೆ.

ಅಮೆರಿಕಾದ ನಿವೃತ್ತ ಫುಟ್ ಬಾಲ್ ಆಟಗಾರ ರೆಕ್ಸ್ ಚಾಪ್ ಮನ್ ಅವರು ಈ ವಿಡಿಯೋವನ್ನು ಜಾಲತಾಣದಲ್ಲಿ ಶೇರ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ 4 ಲಕ್ಷ ವೀಕ್ಷಣೆಯಾಗಿದ್ದು, 16 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...