alex Certify ಮಂಗನ ಕೈಯಲ್ಲಿ ವಿಡಿಯೋ ಗೇಮ್​ ಆಡಿಸಿದ ಎಲಾನ್​ ಮಸ್ಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗನ ಕೈಯಲ್ಲಿ ವಿಡಿಯೋ ಗೇಮ್​ ಆಡಿಸಿದ ಎಲಾನ್​ ಮಸ್ಕ್​..!

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಎಲಾನ್​​ ಮಸ್ಕ್​​ರ ಕಂಪನಿ ನ್ಯೂರಾಲಿಂಕ್​​ ಕಂಪ್ಯೂಟರ್​​​ನಲ್ಲಿ ಮಂಗವೊಂದು ವಿಡಿಯೋಗೇಮ್​ ಆಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಎಲಾನ್​​ ಮಸ್ಕ್​​​ರ ಈ ಕಂಪನಿ ಇಂತಹದ್ದೊಂದು ವಿಶೇಷ ಚಿಪ್​​ನ್ನು ತಯಾರಿಸಿದ್ದು ಇದರ ಸಹಾಯದಿಂದ ಮೆದುಳನ್ನ ಕಂಪ್ಯೂಟರ್​​ ಜೊತೆ ಸಂಪರ್ಕ ಮಾಡಬಹುದಾಗಿದೆ.

ಎಲಾನ್​ ಮಸ್ಕ್​​ ಈ ಚಿಪ್​​ ಬಳಸಿ ಮಂಗವೊಂದು ವಿಡಿಯೋ ಗೇಮ್​ ಆಡುತ್ತಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋವನ್ನ ರೆಕಾರ್ಡ್​ ಮಾಡುವ 6 ವಾರಗಳ ಮುಂಚೆ ಕೋತಿಯ ಮೆದುಳಿನಲ್ಲಿ ನ್ಯೂರಾಲಿಕ್​ ಚಿಪ್​​ ಅಳವಡಿಸಿದ್ದಾರೆ.

ಈ ಕೋತಿಗೆ ಮೊದಲು ಒಂದು ಜಾಯ್​ಸ್ಟಿಕ್​​​ ಮಾಧ್ಯಮದಿಂದ ಆನ್​ಸ್ಕ್ರೀನ್​​​ ಗೇಮ್​​ ಆಡಿದೆ. ಇದಕ್ಕೆ ಎಲಾನ್​ ಮಸ್ಕ್​​, ಪಾಂಗ್​​ ನ್ನು ಕೋತಿಯು ತನ್ನ ಬುದ್ಧಿ ಶಕ್ತಿಯನ್ನುಪಯೋಗಿಸಿ ಆಟವಾಡಿದೆ. ಈ ಕೋತಿಯು ಬ್ರೇನ್​ಚಿಪ್​ ಬಳಕೆ ಮಾಡಿ ಟೆಲಿಪತಿಯ ಸಹಾಯದಿಂದ ಈ ವಿಡಿಯೋಗೇಮ್​ ಆಡಿದೆ. ಎಲಾನ್​ ಮಸ್ಕ್​​ರ ಈ ಟ್ವೀಟ್​ ಲಕ್ಷಗಟ್ಟಲೇ ಲೈಕ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಈ ಬ್ರೇನ್​ ಚಿಪ್​ಗಳು ಪಾರ್ಶ್ವವಾಯುವಿನಿಂದ ಬಳಲುತ್ತಿರುವವರಿಗೆ ಸ್ಮಾರ್ಟ್​ ಫೋನ್​ ಬಳಕೆ ಮಾಡುವಷ್ಟು ಶಕ್ತಿಯನ್ನ ನೀಡುತ್ತೆ. ಕೈ ಬೆರಳಿನಿಗಿಂತ ವೇಗವಾಗಿ ವ್ಯಕ್ತಿ ತನ್ನ ಮೆದುಳಿನ ಚುರುಕಿನಿಂದಾಗಿ ಸ್ಮಾರ್ಟ್​ ಫೋನ್​ ಬಳಕೆ ಮಾಡ್ತಾರೆ ಅಂತಾ ಮಸ್ಕ್​​​ ಇನ್ನೊಂದು ಟ್ವೀಟ್​ ಮಾಡಿದ್ದಾರೆ.

ಸ್ಪೇಸ್​ ಎಕ್ಸ್​ ಹಾಗೂ ಟೆಸ್ಲಾದಂತಹ ದೈತ್ಯ ಕಂಪನಿಗಳ ಮೂಲಕ ವಾಹನಗಳು ಹಾಗೂ ಅಂತರಿಕ್ಷ ವಿಭಾಗದಲ್ಲಿ ಸಾಧನೆ ಮಾಡಿದ್ದ ಮಸ್ಕ್​ ಇದೀಗ ಮನುಷ್ಯನ ಮೆದುಳಿನ ಮೇಲೂ ಕೆಲಸ ಮಾಡೋಕೆ ಶುರು ಮಾಡಿದ್ದಾರೆ. ಈ ಕಂಪನಿಗೆ ಮಸ್ಕ್​ ನ್ಯೂರಾಲಿಂಕ್​ ಎಂದು ಹೆಸರನ್ನ ಇಟ್ಟಿದ್ದಾರೆ. ಇದು ಮಸ್ಕ್​​ರ ನ್ಯೂರಲ್​​ ಇಂಟರ್​ಫೇಸ್​​ ಟೆಕ್ನಾಲಜಿ ಕಂಪನಿಯಾಗಿದೆ. ಇದರ ಸಹಾಯದಿಂದ ಮನುಷ್ಯನ ಮೆದುಳಿನಲ್ಲಿ ಚಿಪ್​ನ್ನು ಹಾಕಲಾಗುತ್ತೆ. ಇಲ್ಲಿ ಮೆದುಳಿನ ಎಲ್ಲಾ ಕ್ರಿಯೆಗಳು ರೆಕಾರ್ಡ್ ಮಾಡಲಾಗುತ್ತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...