ಸೀಗಲ್ ಒಂದು ಶಾಪಿಂಗ್ ಮಾಲ್ ಗೆ ನುಗ್ಗಿ ಚಿಪ್ಸ್ ಕಳವು ಮಾಡುವ ವಿಡಿಯೋ ಸಖತ್ ವೈರಲ್ ಆಗಿದೆ. ನಿಧಾನವಾಗಿ ಏಕಾಂಗಿಯಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮಾಲ್ ಒಳಗೆ ಆಗಮಿಸುವ ಸೀಗಲ್ ನೇರವಾಗಿ ರ್ಯಾಕ್ ಬಳಿ ತೆರಳಿ ಹಳದಿ ಚಿಪ್ಸ್ ಪ್ಯಾಕ್ ಒಂದನ್ನು ಕಚ್ಚಿಕೊಳ್ಳುತ್ತದೆ. ಆಗ ಇನ್ನೊಂದು ಪ್ಯಾಕ್ ಕೆಳಗೆ ಬೀಳುತ್ತದೆ.
ಆದರೆ, ಅದಕ್ಕೆ ತಲೆ ಕೆಡಿಸಿಕೊಳ್ಳದ ಸೀಗಲ್ ಚಿಪ್ಸ್ ಪ್ಯಾಕ್ ಹೊತ್ತು ಲಗುಬಗೆಯಲ್ಲಿ ಮಾಲ್ ನಿಂದ ಹೊರಗೋಡುತ್ತದೆ. btw there’s still a pandemic.’ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು “ಸಾಮಾನ್ಯ ಪ್ರವೇಶವಲ್ಲ. ಲಗುಬಗೆಯಿಂದ ಹೊರಗೆ ಹೋಗುವುದು…..ಇದು ನಿಪುಣ ಅಂಗಡಿ ಕಳ್ಳ ಸೀಗಲ್” ಎಂದು ಕ್ಯಾಪ್ಶನ್ ನೀಡಲಾಗಿದೆ. ವಿಡಿಯೋ 4 ಲಕ್ಷ ವೀಕ್ಷಣೆ ಪಡೆದಿದ್ದು, ಮೂರುವರೆ ಲಕ್ಷ ಜನ ಇಷ್ಟಪಟ್ಟಿದ್ದಾರೆ. 85 ಸಾವಿರ ಜನ ರಿ ಟ್ವೀಟ್ ಮಾಡಿದ್ದಾರೆ.