ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಸದಾ ತನ್ನ ವಸ್ತ್ರ ವಿನ್ಯಾಸದ ಮೂಲಕವೇ ಸದ್ದು ಮಾಡುವಂತ ಮಹಿಳೆ. ಕೋವಿಡ್ನಿಂದ ಕೆಲ ದಿನಗಳ ಹಿಂದಷ್ಟೇ ಚೇತರಿಸಿಕೊಂಡಿದ್ದ ಮೆಲನಿಯಾ ಟ್ರಂಪ್ ಅಮೆರಿಕದ ಪೆನ್ಸಿಲ್ವೇನಿಯಾ ಅಟ್ಲೇನ್ನಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ.
ಹಸಿರು ಬಣ್ಣದ ಕೋಟ್ ಮಾದರಿಯ ಡ್ರೆಸ್ ಹಾಗೂ ಅದಕ್ಕೆ ಬೆಲ್ಟ್ ಹಾಕಿದ್ದ ರೀತಿ ಇದ್ದ ಮೆಲನಿಯಾ ಡ್ರೆಸ್ ನೋಡೋಕೆ ಎಷ್ಟು ಸಿಂಪಲ್ ಇದೆನೋ ದರ ಮಾತ್ರ ಅಷ್ಟೇ ದುಬಾರಿಯಾಗಿದೆ. ಮುಂಭಾಗದಲ್ಲಿ ಬಟನ್ಗಳನ್ನ ಹೊಂದಿರುವ ಈ ಲಾಂಗ್ ಕೋಟ್ ಮಾದರಿಯ ಡ್ರೆಸ್ ಬೆಲೆ ಬರೋಬ್ಬರಿ 33,690 ರೂಪಾಯಿಗಳಂತೆ.
ಹೈ ಹೀಲ್ಡ್ ಶೂ ಧರಿಸಿದ್ದ ಮೆಲನಿಯಾ ಸರಳವಾದ ಮೇಕಪ್ ಹಾಗೂ ಓಪನ್ ಹೇರ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ,